ಜಿಲ್ಲೆ

ಮನೆಯಿಂದ ಹೊರ ಬಾರದ ಜನ

Gadag - Desk - Tippanna Avadoot

ಗಜೇಂದ್ರಗಡ: ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಜಿಟಿಟಿಟಿ ಮಳೆಯಾಗುತ್ತಿರುವ ಪರಿಣಾಮ ಒಂದೆಡೆ ವ್ಯಾಪಾರಸ್ಥರು ಗ್ರಾಹಕರಿಲ್ಲದೆ ಕಂಗಾಲಾಗಿದ್ದರೆ, ರೈತರು ಜಮೀನುಗಳಲ್ಲಿ ಕಾಲಿಡದ ಪರಿಸ್ಥಿತಿ ನಿರ್ವಣವಾಗಿದೆ.


ತಾಲೂಕಿನಲ್ಲಿ ಮುಂಗಾರು ಮಳೆ ತಡವಾಗಿ ಪ್ರಾರಂಭವಾದ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ತಡವಾಗಿ ಪ್ರಾರಂಭವಾಗಿದೆ.

ಒಂದಿಷ್ಟು ರೈತರು ಸಮರ್ಪಕ ಮಳೆಯಿಲ್ಲದೆ ಬಿತ್ತನೆ ಮಾಡಿಲ್ಲ. ಕೆಲವರು ಗೋವಿನಜೋಳ, ಹತ್ತಿ ಬಿತ್ತನೆ ಮಾಡಿದ್ದಾರೆ. ಜಿಟಿಜಿಟಿ ಮಳೆಯಿಂದಾಗಿ ಗೋವಿನಜೋಳ ಬೆಳೆಗೆ ಲದ್ದಿ ಹುಳು ಕಾಟ, ಹತ್ತಿ ಬೆಳೆಗೆ ಕೆಂಪು ರೋಗ ರೈತರ ನಿದ್ದೆಗೆಡಿಸಿದೆ.

ಜಿಟಿಜಿಟಿ ಮಳೆಯಿಂದಾಗಿ ಜನರು ಮನೆಯಿಂದ ಹೊರಬರದ ಪರಿಸ್ಥಿತಿ ಎದುರಾದ ಹಿನ್ನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆಯಲ್ಲಿ ಎಲ್ಲ ಅಂಗಡಿಗಳಲ್ಲಿ ವ್ಯಾಪಾರವಿಲ್ಲದೆ ಬಿಕೋ ಎನ್ನುತ್ತಿವೆ.