ಶರಣಪ್ಪ ಸುಣಗಾರ 
ಜಿಲ್ಲೆ

ಜನರು ಕಾಂಗ್ರೆಸ್​ ಆಡಳಿತ ಬಯಸುತ್ತಿದ್ದಾರೆ

ಗಿರೀಶ ಸಗರ

ತಾಂಬಾ: ದೇಶಾದ್ಯಂತ ಕಾಂಗ್ರೆಸ್​ ಪದ ಪೂರಕವಾದ ವಾತಾವರಣವಿದೆ. ಬಿಜೆಪಿಯ ವಿರೋಧಿ ಅಲೆಯಿಂದ ಬದಲಾದ ರಾಜಕಿಯ ಸನ್ನಿವೇಶದಲ್ಲಿ ಜನರು ಮತ್ತೆ ಕಾಂಗ್ರೆಸ್​ ಆಡಳಿತ ಬಯಸುತ್ತಿದ್ದಾರೆ.

ಈ ಭಾರಿ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಗೆಲ್ಲುವದು ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್​ ಪ ಅಧಿಕಾರಕ್ಕೆ ಬರುವದು ಖಚ್ಚಿತ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.

ಗ್ರಾಮದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಮೇಶ ಜಿಗಜಿಣಗಿ ಅವರು ಜಿಲ್ಲೆಯ ಬಗ್ಗೆಯಾಗಲಿ ನಮ್ಮ ಕರ್ನಾಟಕದ ಬಗ್ಗೆ ಧ್ವನಿಯತ್ತದೆ ನಿಷ್ಕ್ರೀಯ ಸಂಸದರಾಗಿದ್ದರು. ಮೋದಿಯವರದ್ದು ಸುಳ್ಳಿನ ಜಾಯಮಾನ ಎಂಬುದು ಜಗಜ್ಜಾಹಿರಾಗಿದೆ ಎಂದರು.

ಈ ಸಲ ನಮ್ಮ ಪದ ಅಭ್ಯರ್ಥಿಗೆ ಕೋಳಿ ಸಮಾಜ, ಪಂಚಮಸಾಲಿ ಸಮಾಜ, ಗಾಣಿಗ ಸಮಾಜ, ಬಂಜರಾ ಸಮಾಜ, ಹಾಲುಮತ ಸಮಾಜ, ಮುಸ್ಲಿಂ ಸಮಾಜ ಮತ್ತು ಎಸ್​ಸಿ ಬಲಗೆ ಸಮಾಜ, ಇನ್ನೂ ಹಲವಾರು ಸಮಾಜಗಳು ಸಂಪೂರ್ಣ ಬೆಂಬಲವನ್ನು ಸೂಚಿಸಿರುವುದರಿಂದ 2 ಲ ಮತಗಳ ಅಂತರದಿಂದ ರಾಜು ಆಲಗೂರ ಅವರು ಜಯ ಸಾಧಿಸಲಿದ್ದಾರೆ ಎಂದರು.

ಕಾಂಗ್ರೆಸ್​ ಪದ ಜಿಲ್ಲಾ ಉಪಾಧ್ಯ ಕಾಮೇಶ ಉಕ್ಕಲಿ, ಹಾಲುಮತ ಸಮಾಜದ ಮುಖಂಡ ಬೀರಪ್ಪ ಮ್ಯಾಗೇರಿ, ಹೊನ್ನಪ್ಪ ಮ್ಯಾಗೇರಿ, ಮಾದುರಾಯಗೌಡ ಪಾಟೀಲ, ಸಿದ್ದಗೊಂಡ ಹಿರೇಕುರಬರ, ಕೋಳಿ ಸಮಾಜದ ಅಧ್ಯ ಮಾಂತೇಶ ಬಡದಾಳ, ಜಟ್ಟೆಪ್ಪ ತಳವಾರ, ಮಲಕಪ್ಪ ಹೋರ್ತ್ತಿ, ರೇವಪ್ಪ ಹೋರ್ತಿ, ಪುಟ್ಟುಗೌಡ ಪಾಟೀಲ ಇದ್ದರು.