ಕೋಟದ ಹಂದಟ್ಟು ಪರಿಸರದಲ್ಲಿ ಗೆಳೆಯರ ಬಳಗ ನೇತೃತ್ವದಲ್ಲಿ ಕೆಸ್ರ್ ಓಕ್ಳಿ ಎಂಬ ಕುಂದಗನ್ನಡದ ಗ್ರಾಮೀಣ ಕ್ರೀಡೆಗಳ ತಿಲ್ಲಾನ ಕಾರ್ಯಕ್ರಮ ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಜಾನಕಿ ಹಂದೆ ಉದ್ಘಾಟಿಸಿದರು 
ಜಿಲ್ಲೆ

ಕೆಸರು ಗದ್ದೆಯಲ್ಲಿ ಮಿಂದೆದ್ದ ಹಂದಟ್ಟು ಜನತೆ

ಇಂದಿರಾ ಎನ್ ಕೆ

ಕೋಟ: ಕೋಟದ ಹಂದಟ್ಟು ಪರಿಸರದಲ್ಲಿ ಗೆಳೆಯರ ಬಳಗ ನೇತೃತ್ವದಲ್ಲಿ ಕೆಸ್ರ್ ಓಕ್ಳಿ ಎಂಬ ಕುಂದಗನ್ನಡದ ಗ್ರಾಮೀಣ ಕ್ರೀಡೆಗಳ ತಿಲ್ಲಾನ ಕಾರ್ಯಕ್ರಮ ಭಾನುವಾರ ಜರುಗಿತು.

ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಅಧ್ಯಕ್ಷೆ ಜಾನಕಿ ಹಂದೆ ಉದ್ಘಾಟಿಸಿದರು. ಹಂದಟ್ಟು ಗೆಳೆಯರ ಬಳಗ ಅಧ್ಯಕ್ಷ ಪ್ರಕಾಶ್ ಹಂದಟ್ಟು ಕೆಸರು ಗದ್ದೆಗೆ ಚಾಲನೆ ನೀಡಿದರು. ಗೆಳೆಯರ ಬಳಗ ಯುವ ಮುಂದಾಳು ಕಿರಣ್ ಪೂಜಾರಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಕೋಟದ ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್, ಸಂಚಾಲಕಿ ಸುಜಾತ ಬಾಯರಿ, ಹಂದಟ್ಟು ಗೆಳೆಯರ ಬಳಗ ಪ್ರಮುಖರಾದ ರಾಜೇಶ್ ಪೂಜಾರಿ, ಆನಂದ್ ಪೂಜಾರಿ, ಶೇಖರ್ ಪೂಜಾರಿ, ಭಾಸ್ಕರ್ ಪೂಜಾರಿ, ಕೃಷ್ಣ ಪೂಜಾರಿ ಮತ್ತಿತರರು ಇದ್ದರು. ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ, ಸುಜಾತ ಬಾಯರಿ ನಿರ್ವಹಿಸಿದರು.

ವಿವಿಧ ಕ್ರೀಡೆ, ಮಕ್ಕಳ ಕಲವರ: ಪ್ರಸ್ತುತ ಆಧುನಿಕ ಕಾಲಘಟ್ಟದಲ್ಲಿ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿರುವ ದಿನಗಳಲ್ಲಿ ಕೆಸರು ಗದ್ದೆ ಮೂಲಕ ಗ್ರಾಮೀಣ ಕ್ರೀಡೆಗಳನ್ನು ಉಳಿಸಲು ಸಾಧ್ಯವಿದೆ ಎಂಬುವುದು ಜಿಲ್ಲೆ ವಿವಿಧ ಭಾಗಗಳಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಸಾಬೀತುಗೊಂಡಿತು.