ದೇವದುರ್ಗ: ಜನರ ಸಮಸ್ಯೆಗಳಿಗೆ ಅಧಿಕಾರಿಗಳು, ಸಿಬ್ಬಂದಿ ಸ್ಪಂದಿಸಲು ಸೂಚಿಸುವಂತೆ ಒತ್ತಾಯಿಸಿ ಗ್ರೇಡ್-2 ತಹಸೀಲ್ದಾರ್ ಭೀಮರಾಯ ಮೇಟಿಗೆ ನಮ್ಮ ಕರ್ನಾಟಕ ಸೇನೆ ಗುರುವಾರ ಮನವಿ ಸಲ್ಲಿಸಿತು.
ಇದನ್ನೂ ಓದಿ: ಪ್ರಶ್ನೆಗಳಿಗೆ ಅಧಿಕಾರಿಗಳು ತತ್ತರ – ಟ್ರಾನ್ಸ್ ಫಾರ್ಮರ್, ಅಳಿಸಿ ಹೋಗುವ ಬಿಲ್ ಸಮಸ್ಯೆ ನಿವೇದನೆ – ಮೆಸ್ಕಾಂ ಜನಸಂಪರ್ಕ ಸಭೆ
ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಜನರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಹಲವು ಅಧಿಕಾರಿಗಳಿಗೆ ಸರ್ಕಾರ ಸಿಮ್ ನೀಡಿದ್ದು ಅದನ್ನು ಬಳಸದೆ ವೈಯಕ್ತಿಕ ಮೊಬೈಲ್ ಸಂಖ್ಯೆ ಬಳಸುತ್ತಿದ್ದಾರೆ. ಜನರು ಸರ್ಕಾರಿ ಸಿಮ್ ನಂಬರ್‌ಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುತ್ತಿಲ್ಲ.
ಗ್ರಾಮೀಣ ಭಾಗದಲ್ಲಿ ಕುಡಿವ ನೀರು, ರಸ್ತೆ, ಚರಂಡಿ ಸೇರಿ ಸಾರ್ವಜನಿಕ ಹಾಗೂ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಹೇಳಬೇಕೆಂದರೆ ಅಧಿಕಾರಿಗಳು ಸಿಗುತ್ತಿಲ್ಲ. ಇದರಿಂದ ಜನರು ಸಮಸ್ಯೆ ಯಾರಿಗೆ ಹೇಳಬೇಕು ಎನ್ನುವುದು ತಿಳಿಯುತ್ತಿಲ್ಲ.
ಎಲ್ಲ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಸಭೆ ಕರೆದು ಕೇಂದ್ರ ಸ್ಥಾನದಲ್ಲಿದ್ದು ಸಮಸ್ಯೆಗೆ ಸ್ಪಂದಿಸುವಂತೆ ಸೂಚಿಸಬೇಕು. ನಿರ್ಲಕ್ಷಿಸಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ಭೀಮನಗೌಡ ಪಾಟೀಲ್, ರಾಜ್ಯ ಸಂಚಾಲಕ ಎಂ.ಎಸ್.ವೆಂಕಟೇಶ, ಪ್ರಮುಖರಾದ ರಂಗಪ್ಪ, ಹನುಮಂತ್ರಾಯ ಗೌಡ, ಚನ್ನಬಸವ, ದೇವೇಂದ್ರಪ್ಪ, ಹುಸ್ಮಾನ್ ಇದ್ದರು.