ಸಿಂಧನೂರಿನಲ್ಲಿ ಸಿಪಿಐಎಂಎಲ್ ಲಿಬರೇಶನ್ ಪಕ್ಷದ ಸಂಸ್ಥಾಪನಾ ಕಾರ್ಯಕ್ರಮ ಆಚರಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ಬಸವರಾಜ ಎಕ್ಕಿ, ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಪ್ರಮುಖರಾದ ಬಸವರಾಜ ಕೊಂಡೆ, ಶೇಕ್ಷಾವಲಿ, ಮಹಾದೇವ ಇದ್ದರು. 
ಜಿಲ್ಲೆ

ಜನವಿರೋಧಿ ಕಾನೂನು ಹಿಂಪಡೆಯಲಿ

Kopala - Desk - Eraveni

ಸಿಂಧನೂರು: ರಾಜ್ಯದಲ್ಲಿ ಭ್ರಷ್ಟಾಚಾರ, ಹೆಚ್ಚಿದ ಜೀವನವೆಚ್ಚ, ಮಹಿಳೆಯರ ಮೇಲೆ ದೌರ್ಜನ್ಯ, ಧಾರ್ಮಿಕ ದ್ವೇಷ ಮತ್ತು ಕೋಮು ಧ್ರುವೀಕರಣ ಹೆಚ್ಚಾಗಿದೆ ಎಂದು ಸಿಪಿಐಎಂಎಲ್ ಲಿಬರೇಷನ್ ಜಿಲ್ಲಾ ಕಾರ್ಯದರ್ಶಿ ಬಸವರಾಜ ಎಕ್ಕಿ ಹೇಳಿದರು.

ನಗರಸಭೆ ಕಚೇರಿ ಎದುರು ಮಂಗಳವಾರ ಹಮ್ಮಿಕೊಂಡಿದ್ದ ಸಿಪಿಐಎಂಎಲ್ ಲಿಬರೇಶನ್ ಪಕ್ಷದ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ನಮನ ಸಲ್ಲಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕಳೆದ ನಾಲ್ಕಾರು ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳನ್ನಷ್ಟೇ ಜಾರಿಗೆ ತಂದಿದೆ.

ಆದರೆ, ಬಿಜೆಪಿ ಸರ್ಕಾರದ ಆಡಳಿತದಲ್ಲಿ ಅನುಷ್ಠಾನಗೊಳಿಸಿದ ಹಲವಾರು ಜನವಿರೋಧಿ ಕಾನೂನುಗಳನ್ನು ಇನ್ನೂ ಹಿಂಪಡೆದಿಲ್ಲ. ಈ ನಡುವೆ ಆರ್‌ಎಸ್‌ಎಸ್, ಬಿಜೆಪಿ ಮತ್ತೆ ಕೋಮುದ್ವೇಷ ಹರಡುವುದನ್ನು ಮುಂದುವರಿಸಿವೆ ಎಂದು ಆರೋಪಿಸಿದರು.

ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ ಮಾತನಾಡಿ, ಜನರ ಬದುಕಿನ ಕಾಳಜಿಗಳಾದ ಭೂಮಿ, ವಸತಿ, ಶಿಕ್ಷಣ, ಉದ್ಯೋಗ, ಕೃಷಿ ಅಭಿವೃದ್ಧಿ, ರೈತರ ಎಲ್ಲ ಬೆಳೆಗಳಿಗೆ ನ್ಯಾಯಯುತ ಬೆಲೆ ಖಾತ್ರಿಪಡಿಸಬೇಕಿದೆ. ಆರೋಗ್ಯ, ಸಾಮಾಜಿಕ ನ್ಯಾಯ, ಸಾಮಾಜಿಕ ಭದ್ರತೆ, ಜಾತಿ ವಿರುದ್ಧದ ಹೋರಾಟ ತೀವ್ರಗೊಳಿಸಬೇಕಾದ ಅಗತ್ಯವಿದೆ ಎಂದರು. ಪ್ರಮುಖರಾದ ಬಸವರಾಜ ಕೊಂಡೆ, ಶೇಕ್ಷಾವಲಿ, ಮಹಾದೇವ, ವೀರೇಶ , ಶಿವರಾಜ ಇದ್ದರು.