ಜಿಲ್ಲೆ

33 ಸಂಕಷ್ಟದಲ್ಲಿ ಜನತಾ ಕಾಲನಿ ಜನತೆ!: ಮತ್ತೆ ಎದುರಾಗಿದೆ ಟ್ಯಾಂಕ್ ಕುಸಿತ ಭೀತಿ : ಪ್ರತಿಭಟನೆ ಎಚ್ಚರಿಕೆ

ಪ್ರವೀಣ್‌ರಾಜ್ ಕೈೊಲ ಕಡಬ

ತಾಲೂಕು ಕೈೊಲ ಗ್ರಾಪಂ ಅಧೀನದಲ್ಲಿರುವ ಕೈೊಲ ಜನತಾ ಕಾಲನಿಯಲ್ಲಿರುವ ಕುಡಿಯುವ ನೀರು ಸರಬರಾಜು ಯೋಜನೆಯ ಬೃಹತ್ ಟ್ಯಾಂಕ್ ಕುಸಿತವಾಗುವ ಹಂತದಲ್ಲಿದ್ದು, ಅಪಾಯ ಎದುರಾಗುವ ಮುನ್ನ ತಕ್ಷಣ ಸಂಬಂಧಪಟ್ಟವರು ಗಮನಹರಿಸಬೇಕು. ವಾರದೊಳಗೆ ಕ್ರಮಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕಾಲನಿ ಜನತೆ ಎಚ್ಚರಿಕೆ ನೀಡಿದ್ದಾರೆ.

ಜನತಾ ಕಾಲನಿಯಲ್ಲಿ 1996ರಲ್ಲಿ ವಿಶ್ವ ಬ್ಯಾಂಕ್ ಕುಡಿಯುವ ನೀರು ಯೋಜನೆ ಮೂಲಕ ನಿರ್ಮಿಸಲಾದ ಬೃಹತ್ ಟ್ಯಾಂಕ್‌ನ ಬುಡದಿಂದಲೇ 15 ಅಡಿ ಎತ್ತರದಲ್ಲಿರುವ ಧರೆ ಕುಸಿತವಾಗಿದೆ. ನಿರಂತರವಾಗಿ ಸುರಿಯುವ ಮಳೆಗೆ ಮಣ್ಣು ಸಡಿಲವಾಗಿ ಧರೆ ಇನ್ನಷ್ಟು ಕುಸಿಯುತ್ತಲೇ ಇದೆ. ಟ್ಯಾಂಕ್‌ನ ಅಡಿಯಲ್ಲಿ 10ಕ್ಕೂ ಅಧಿಕ ಮನೆಗಳಿದ್ದು, ಅದು ಕುಸಿತಗೊಂಡಲ್ಲಿ ಮನೆಗಳೂ ನೆಲಸಮವಾಗುವ ಸಾಧ್ಯತೆಯ ಬಗ್ಗೆ ಸ್ಥಳೀಯ ನಿವಾಸಿಗಳು ಭೀತಿ ವ್ಯಕ್ತಪಡಿಸಿದ್ದಾರೆ.

ತಿಂಗಳ ಹಿಂದೆ ಪಂಚಾಯಿತಿ ನೊಟೀಸು

ಟ್ಯಾಂಕ್ ಕುಸಿತವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಟ್ಯಾಂಕ್ ಸಮೀಪದಲ್ಲಿರುವ 6 ಮನೆಯವರನ್ನು ಮನೆ ಖಾಲಿ ಮಾಡುವಂತೆ ಕೈೊಲ ಗ್ರಾಪಂ ತಿಂಗಳ ಹಿಂದೆ ನೋಟಿಸ್ ನೀಡಿದೆ. ಇದಕ್ಕೆ ಸಮ್ಮತಿಸದ ಮನೆಯವರು ‘ಮನೆಯಲ್ಲಿ ಹಾಲು ಕರೆಯುವ ದನಕರು ಇದೆ ಅವನ್ನು ಎಲ್ಲಿ ಕರೆದೊಯ್ಯಲಿ, ಬಹುತೇಕ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದು, ಅವರನ್ನೆಲ್ಲ ಕರೆದುಕೊಂಡು ನಾವುಗಳು ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿ ಟ್ಯಾಂಕ್ ನೆಲಸಮ ಮಾಡಿ, ಆ ವೇಳೆಯಲ್ಲಿ ನಾವುಗಳು ನೆಂಟರ ಮನೆಗೆ ಹೋಗಿಯಾದರೂ ಉಳಿದುಕೊಂಡು ಬರುತ್ತೇವೆ, ಆದರೆ ಪೂರ್ಣ ಪ್ರಮಾಣದಲ್ಲಿ ಮನೆ ಖಾಲಿ ಮಾಡಿ ಹೋಗುವುದಕ್ಕೆ ನಮ್ಮಿಂದ ಸಾಧ್ಯವಿಲ್ಲ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುಂದೆ ಅಸಹಾಯಕತೆ ವ್ಯಕ್ತಪಡಿಸಿದ್ದರು.

ಟ್ಯಾಂಕ್ ತೆರವು ಮಾಡುವ ಸಲುವಾಗಿ ಪಂಚಾಯಿತಿ ಟೆಂಡರ್ ಕರೆದಿತ್ತು. ಪಂಚಾಯಿತಿ ಬಿಡ್ 60 ಸಾವಿರ ನಿಗದಿಯಾಗಿತ್ತು. ಯಾರೂ ಬಿಡ್ ಹಾಕಿರಲಿಲ್ಲ. ಈ ಬಗ್ಗೆ ತಾಲೂಕು ಪಂಚಾಯಿತಿಗೆ ತಿಳಿಸಲಾಗಿದೆ. ಅಲ್ಲಿಂದ ಆದೇಶ ಆದ ಬಳಿಕ ಕ್ರಮಕೈಗೊಳ್ಳಲಾಗುವುದು. ಪುಷ್ಪಾ ಸುಭಾಷ್ ಶೆಟ್ಟಿ ಕೈೊಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಡ್ ಹಾಕಿ, ಹಣ ಕಟ್ಟಿ ಅದನ್ನು ತೆಗೆಯುವವರಿಗೆ ಏನೂ ಲಾಭ ಇರುವುದಿಲ್ಲ. ಹೊರತಾಗಿ ಅದನ್ನು ಕೆಡವುವಾಗ ಅದರಿಂದಾಗಿ ಅದರ ಅಡಿಯಲ್ಲಿರುವ ಮನೆಗಳಿಗೆ ಹಾನಿ ಉಂಟಾದರೆ ಯಾರು ಹೊಣೆ? ಆದ ಕಾರಣ ಸರ್ಕಾರವೇ ಮಳೆ ಹಾನಿ ನಿಧಿ ಬಳಸಿಕೊಂಡು ಅದನ್ನು ತೆರವು ಮಾಡಿಕೊಡಬೇಕು. ಇನ್ನು 1 ವಾರದ ಒಳಗಾಗಿ ಈ ಬಗ್ಗೆ ಕ್ರಮಕೈಗೊಳ್ಳದೇ ಇದ್ದಲ್ಲಿ ಗ್ರಾಮಸ್ಥರು ಸಂಘಟಿತರಾಗಿ ಪಂಚಾಯಿತಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಅನಿವಾರ್ಯವಾದೀತು. ಸಲೀಕ ರೆಹವಾನ್ ಕೆಮ್ಮಾರ ಸಾಮಾಜಿಕ ಕಾರ‌್ಯಕರ್ತೆ https://www.vijayavani.net/coconut-price-hike https://www.vijayavani.net/wild-boar-attack-in-agricultural-area