module: NormalModule; touch: (0.34444445, 0.34444445); modeInfo: ; sceneMode: Auto; cct_value: 0; AI_Scene: (-1, -1); aec_lux: 134.0; 
ಜಿಲ್ಲೆ

ಮಳೆಗೆ ಜನರು ಹೈರಾಣ

ಲಲಾಟಾಕ್ಷ ಎಸ್

ಅರಕಲಗೂಡು: ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮುಂಗಾರು ಮಳೆ ಜನರನ್ನು ಹೈರಾಣಾಗಿಸಿದೆ.


ಕಳೆದ ಎರಡು ವಾರಗಳಿಂದ ಬಿಡುವಿಲ್ಲದೆ ಬೀಳುತ್ತಿರುವ ಮಳೆ ಕಳೆದೆರಡು ದಿನಗಳಿಂದ ಸ್ವಲ್ಪ ಮಟ್ಟಿಗೆ ಕ್ಷೀಣಿಸಿತ್ತು. ಇದೀಗ ಮತ್ತೆ ಬಿರುಸು ಪಡೆದುಕೊಂಡಿರುವ ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಜಿಟಿ ಜಿಟಿ ಮಳೆಯಿಂದಾಗಿ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತಾಗಿದೆ. ಪಟ್ಟಣದ ದಿನವಹಿ ಮಾರುಕಟ್ಟೆಯಲ್ಲಿ ಮಳೆಗೆ ವ್ಯಾಪಾರಸ್ಥರು ಹೈರಾಣಾಗಿದ್ದಾರೆ. ಮಳೆಯಿಂದಾಗಿ ವಾಸದ ಮನೆಗಳ ಮುಂಭಾಗ ತುಂಬಿ ಹರಿಯುತ್ತಿರುವ ಚರಂಡಿಗಳ ಗಲೀಜು ನೀರು ಹರಡಿ ವಾತಾವರಣ ಕಲುಷಿತಗೊಂಡಿದ್ದು ಜನರು ಓಡಾಡಲು ಪರದಾಡುವಂತಾಗಿದೆ. ಸತತ ಮಳೆಗೆ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡು ರೈತರನ್ನು ಚಿಂತೆಗೀಡು ಮಾಡಿದೆ.