ಮುದಗಲ್ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ 1.5 ಲಕ್ಷ ರೂ. ಡಿಡಿಯನ್ನು ತಾಲೂಕು ಯೋಜನಾಧಿಕಾರಿ ಅಡಿವೆಯ್ಯಸ್ವಾಮಿ ಹಸ್ತಾಂತರಿಸಿದರು. ಪ್ರಮುಖರಾದ ತೋಟಮ್ಮ, ದಾವುದ್‌ಸಾಬ, ಅಯ್ಯಪ್ಪಯ್ಯ, ಮೌನೇಶ, ಶಿವನಾಗಪ್ಪ ಇತರರಿದ್ದರು. 
ಜಿಲ್ಲೆ

ಜನಜಾಗೃತಿ ವೇದಿಕೆ ರಚನೆ

Kopala - Desk - Eraveni

ಮುದಗಲ್: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಮಹಿಳೆಯರಿಗೆ ಗುಂಪಿನ ಮೂಲಕ ಸಾಲ ವಿತರಣೆ, ಶಾಲಾ ಮಕ್ಕಳಿಗೆ ಶಿಷ್ಯ ವೇತನ, ಅಂಗವಿಕಲರಿಗೆ ಪರಿಕರ ನೀಡುವ ಯೋಜನೆಗಳು ಸೇರಿ ವಿವಿಧ ಜನಪರ ಯೋಜನೆಗಳನ್ನು ಸಂಘದ ಸದಸ್ಯರಿಗೆ ತಲುಪಿಸಲಾಗುತ್ತಿದೆ ಎಂದು ಸಂಸ್ಥೆ ತಾಲೂಕು ಯೋಜನೆ ಅಧಿಕಾರಿ ಅಡಿವೆಯ್ಯ ಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ 1.5 ಲಕ್ಷ ರೂ. ಡಿಡಿಯನ್ನು ದೇವಸ್ಥಾನ ಸಮಿತಿಗೆ ಹಸ್ತಾಂತರಿಸಿ ಬುಧವಾರ ಮಾತನಾಡಿದರು. ತಾಲೂಕಿನಲ್ಲಿ 2013ರಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಅಂದಾಜು 20 ಕೋಟಿ ರೂ. ಅಧಿಕ ಸಂಘದ ಸದಸ್ಯರಿಗೆ ಗುಂಪಿನ ಮೂಲಕ ಸಾಲ ನೀಡಲಾಗಿದೆ. ರಾಜ್ಯದ 5 ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಸಾಲ ಕೊಡಿಸಲಾಗುತ್ತಿದೆ.

ಸಂಸ್ಥೆಯು ಹಣಕಾಸು ವ್ಯವಹಾರವಲ್ಲದೇ ಜನಜಾಗೃತಿ ವೇದಿಕೆ ರಚಿಸಿದ್ದು, ಅದರ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುತ್ತದೆ. ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪದೊಂದಿಗೆ ದುಶ್ಚಟಗಳಿಗೆ ಬಲಿಯಾಗದಂತೆ ಮನವರಿಕೆ ಮಾಡಲಾಗುತ್ತಿದೆ. ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಧನ ಸಹಾಯ, ಶಿಷ್ಯವೇತನ ಮಂಜೂರು ಮಾಡಲಾಗುತ್ತಿದೆ. ಜತೆಗೆ ಶಿಕ್ಷಕರ ಕೊರತೆ ಇದ್ದ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ಒದಗಿಸಿ ಅವರಿಗೆ 8000 ರೂ. ಮಾಸಿಕ ವೇತನ ಪಾವತಿ ಮಾಡಲಾಗುತ್ತಿದೆ ಎಂದರು.