ಜಿಲ್ಲೆ

ಜನ ಜಾಗೃತಿಗಾಗಿ ಸೈಕಲ್ ಜಾಥಾ

ಬೆಳಗಾವಿ: ಸೈಕಲ್ ಜಾಥಾ ಮೂಲಕ ರಸ್ತೆ ಅಪಘಾತ ತಡೆಗಟ್ಟುವಿಕೆ, ರಸ್ತೆ ಸುರಕ್ಷತಾ ಕ್ರಮಗಳು ಪಾಲಿಸುವಿಕೆ ಹಾಗೂ ಕರೊನಾ ನಿಯಂತ್ರಣ ಜಾಗೃತಿ ಮೂಡಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್ ಹೇಳಿದ್ದಾರೆ.

ಭಾನುವಾರ 2ನೇ ಕೆಎಸ್‌ಆರ್‌ಪಿ ಬಟಾಲಿಯನ್ ಹಾಗೂ ರೋಟರಿ ಕ್ಲಬ್ ಆಪ್ ಬೆಳಗಾಂ ನಾರ್ಥ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಫಿಟ್ ಇಂಡಿಯಾ ಸೈಕ್ಲೋಥಾನ್ 2020-21ಕ್ಕೆ ಚಾಲನೆ ನೀಡಿ ಮಾತನಾಡಿದದರು.

ರೋಟರಿ ಕ್ಲಬ್ ಆಫ್ ಬೆಲಗಾಂ ನಾರ್ಥ್‌ನ ಅಧ್ಯಕ್ಷ ಇರ್ಫಾನ್ ಶೇಖಾಲಿ ಮಾತನಾಡಿ, ಸರ್ಕಾರದ ನಿಯಮ ಪಾಲಿಸಿದರೆ ಕರೊನಾ ಸೋಂಕಿನಿಂದ ದೂರವಿರಬಹುದು ಎಂದರು. ನಗರದ ಚನ್ನಮ್ಮ ವೃತ್ತದಿಂದ ಆರಂಭಗೊಂಡ ರ‌್ಯಾಲಿ ಕ್ಯಾಂಪ್ ಪ್ರದೇಶ, ಟಿಳಕವಾಡಿ, ಉದ್ಯಮಬಾಗ, ಪೀರನವಾಡಿಯಿಂದ ಮಚ್ಛೆ ಗ್ರಾಮದಲ್ಲಿರುವ 2ನೇ ಕೆಎಸ್‌ಆರ್‌ಪಿ ತರಬೇತಿ ಕೇಂದ್ರದಲ್ಲಿ ಮುಕ್ತಾಯಗೊಂಡಿತು.

ಕೆಎಸ್‌ಆರ್‌ಪಿ ಕಮಾಂಡೆಂಟ್ ಹಮ್ಜಾ ಹುಸೇನ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ವಿಕ್ರಂ ಆಮಟೆ, ಸಿಬ್ಬಂದಿ ಇದ್ದರು.