????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಬೀದಿನಾಯಿ ಕಾಟಕ್ಕೆ ಜನ ಹೈರಾಣ

ಮಾಗಡಿಯಲ್ಲಿ ಶ್ವಾನ ಸಂತತಿ ನಿಯಂತ್ರಣಕ್ಕಿಲ್ಲ ಕ್ರಮ

* ಎಂ.ಎಸ್.ಸಿದ್ದಲಿಂಗೇಶ್ವರ, ಮಾಗಡಿ

ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿಗೆ ನಾಗರಿಕರು ರೋಸಿ ಹೋಗಿದ್ದು, ಪುರಸ‘ೆ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೌದು... ಪಟ್ಟಣದ ಎಲ್ಲ ವಾರ್ಡ್ಗಳಲ್ಲಿ ದಿನದಿಂದ ದಿನಕ್ಕೆ ಬೀದಿನಾಯಿಗಳ ಸಂತತಿ ಹೆಚ್ಚುತ್ತಲೇ ಇದೆ. ಕಲ್ಯಾಗೇಟ್ನಿಂದ ತಾಲೂಕು ಕಚೇರಿಯವರೆಗೂ ರಸ್ತೆಗಳ ಮಧ್ಯದಲ್ಲೇ ನೂರಾರು ಶ್ವಾನಗಳು ಮಲಗಿರುತ್ತವೆ.

ದ್ವಿ-ಚಕ್ರವಾಹನ ಸವಾರರು ಹಾರ್ನ್ ಮಾಡಿದರೆ ಸಾಕು ನಾಯಿಗಳ ಹಿಂಡು ಸವಾರರ ಮೇಲೆ ಏರಗಿ, ಕೆಳಗೆ ಬೀಳಿಸುತ್ತವೆ. ಕೆಲವೊಮ್ಮೆ ಏಕಾಏಕಿ ನಾಯಿಗಳು ಅಡ್ಡ ಬಂದು ಅಪಘಾತಕ್ಕೂ ಕಾರಣವಾಗಿದೆ. ಸಾಕಷ್ಟು ಮಂದಿ ಗಾಡಿಯಿಂದ ಬಿದ್ದು ಗಾಯಗೊಂಡಿದ್ದು, ಸ್ವಲ್ಪ ಯಾಮಾರಿದರೆ ನಾಯಿಗಳೇ ಕಚ್ಚಿ, ಗಂಭೀರ ಗಾಯಗೊಳಿಸುತ್ತಿವೆ. ಪರಿಣಾಮ ಕೆಲ ಮಾರ್ಗಗಳಲ್ಲಿ ನಾಗರಿಕರು ಸಂಚರಿಸಲು ಭಯಪಡುವಂತಾಗಿದೆ.

ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರ ಮೇಲೆ ನಾಯಿಗಳು ನಿರಂತರವಾಗಿ ದಾಳಿ ಮಾಡುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಆದರೂ ಬೀದಿನಾಯಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಅವುಗಳ ಸಂತತಿ ನಿಯಂತ್ರಿಸಲು, ಸ್ಥಳಿಯ ಆಡಳಿತ ಶ್ವಾನಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮತ್ತು ದತ್ತು ಕಾರ್ಯಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ, ಅಸಮಾಧಾನ ಕೇಳಿಬರುತ್ತಿದೆ.

ಕೈಯಲ್ಲಿ ಬೆತ್ತ ಹಿಡಿದುಕೊಂಡೇ ಸಂಚಾರ

ಪಾಲಕರು ಮಕ್ಕಳನ್ನು ಶಾಲೆಗೆ ಬಿಡಲು, ಬೆಳಗಿನ ಹೊತ್ತಿನಲ್ಲಿ ಕೆಲಸಕಾರ್ಯಗಳಿಗೆ ಕೈಯಲ್ಲಿ ಒಂದು ಬೆತ್ತ ಹಿಡಿದುಕೊಂಡೇ ಹೋಗುವಂತಾಗಿದೆ. ಇನ್ನು ಕೆಂಪೇಗೌಡ ವೃತ್ತದಿಂದ ಗಾಂಧಿವೃತ್ತದವರೆಗಿನ ಒಂದೂವರೆ ಕಿ.ಮೀ. ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಎಲ್ಲೆಂದರಲ್ಲಿ ಗುಂಡಿ ತೆಗೆದಿರುವ ಜಾಗದಲ್ಲಿ ನಾಯಿಗಳು ಕುಳಿತುಕೊಂಡಿರುತ್ತವೆ. ನಡೆದುಕೊಂಡು ಹೋಗುವಾಗ ಅವರನ್ನು ಓಡಿಸಿಕೊಂಡು ಹೋಗಿ ಕಚ್ಚಲು ಮುಗಿಬೀಳುತ್ತವೆ. ಆದರೂ ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರು ನಾಗರಿಕರದ್ದು.

ಪುರಸಭೆ ಮುಖ್ಯಾಧಿಕಾರಿ

ಶ್ರೀನಿವಾಸ್

ಬೀದಿ ನಾಯಿಗಳನ್ನು ಹಿಡಿದು, ಅವುಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಲು ಒಂದಕ್ಕೆ 1,650 ರೂ.ಗೆ ಟೆಂಡರ್ ಆಹ್ವಾನಿಸಲಾಗಿತ್ತು. ಈ ಹಣ ಕಡಿಮೆಯಾಗುತ್ತದೆ ನಮಗೆ 2,200 ರೂ. ನೀಡುವಂತೆ ಕೇಳಿದ್ದರಿಂದ ಟೆಂಡರ್ ರದ್ದಾಗಿತ್ತು. ಈಗ ಮತ್ತೆ ಟೆಂಡರ್ ಕರೆಸಿ, ಬಿಡದಿ ಮೂಲದವರಿಗೆ ಕೊಡಲಾಗಿದೆ. ಒಂದು ತಿಂಗಳ ಒಳಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ನಡೆಸಿ, ಕ್ರಮವಹಿಸಲಾಗುವುದು.

ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಮನೆಗಳಿಂದ ಹೊರಹೊಗಲು ಆಗುತ್ತಿಲ್ಲ. ನಾಯಿಗಳ ಸಂತಾನೋತ್ಪತ್ತಿ ನಿಯಂತ್ರಿಸಲು ಪುರಸಭೆ ವಿಲವಾಗಿದೆ. ನಾಯಿಗಳ ಹಾವಳಿ ತಡೆಗಟ್ಟಲು ಅಧಿಕಾರಿಗಳು ಮುಂದಾಗದಿದ್ದರೆ ಪ್ರತಿ‘ಟನೆ ನಡೆಸಲಾಗುವುದು.

ಮಂಜುನಾಥ್,

ಮಾಗಡಿ ನಿವಾಸಿ