ಜಿಲ್ಲೆ

ಗ್ರಾಪಂ ಸಿಬ್ಬಂದಿ ಫೋನ್​ ಪೇ ವಹಿವಾಟಿಗೆ ಲೋಕಾ ದಂಗು

ಉಪಲೋಕಾಯುಕ್ತ ವೀರಪ್ಪ ನೇತೃತ್ವದ ತಂಡ ರಾಯಲ್ಪಾಡು ಗ್ರಾಪಂಗೆ ಭೇಟಿ, ಪರಿಶೀಲನೆ

ಶ್ರೀನಿವಾಸಪುರ: ಕೇಂದ್ರ, ರಾಜ್ಯ ಸರ್ಕಾರಗಳು ಗ್ರಾಮೀಣಾಭಿವೃದ್ಧಿಗಾಗಿ ಅನೇಕ ಯೋಜನೆ ಜಾರಿಗೆ ತಂದಿದ್ದು, ಸ್ಥಳಿಯ ಅಧಿಕಾರಿಗಳು ಸರ್ಕಾರದ ಯೋಜನೆಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕು ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಹೇಳಿದರು.

ತಾಲೂಕಿನ ರಾಯಲ್ಪಾಡು ಗ್ರಾಮ ಪಂಚಾಯಿತಿಗೆ ಉಪಲೋಕಾಯುಕ್ತ ತಂಡ ಶನಿವಾರ ಭೇಟಿ ನೀಡಿ ದಾಖಲೆ ಪರಿಶೀಲಿಸಿದ ನಂತರ ಮಾತನಾಡಿದರು.

ಮುದಿಮಡುಗು ಗ್ರಾಮಪಂಚಾಯಿತಿ ಗಣಕಯಂತ್ರದ ಸಿಬ್ಬಂದಿ ೋನ್​&ಪೇ ವಹಿವಾಟು ಕಂಡು ಉಪಲೋಕಾಯುಕ್ತರೇ ಬೆರಗಾದರು. ವಿವಿಧ ಕಾಮಗಾರಿ ಬಗ್ಗೆ ಮಾಹಿತಿ ಪಡೆದರು. ಕಾಮಗಾರಿಗಳಿಗೆ ಅಧ್ಯಕ್ಷರು ಸಹಿ ಹಾಕಿ, ಪಿಡಿಒ ಸಿಹಿ ಹಾಕದಿರುವುದರ ಬಗ್ಗೆ ಪ್ರಶ್ನಿದರು. ಶಿಶು ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು.

ಲೋಕಾಯುಕ್ತ ಇನ್​ಸ್ಪೆಕ್ಟರ್​ಗಳಾದ ಆಂಜನಪ್ಪ, ರೇಣುಕಾ, ಪ್ರದಿಪ್​ಪೂಜಾರಿ, ಸಿಬ್ಬಂದಿ ಎಸ್​.ಆರ್​.ದೇವಪ್ಪ, ಶ್ರೀನಾಥ್​, ನಾಗಭೂಷಣ್​, ರಮೇಶ್​, ಕಿಶೋರ್​, ಶಿವಶಂಕರ್​, ವಾಸುದೇವ್​, ಅಜಯ್​, ಮಂಜಪ್ಪ, ನಾಗವೇಣಿ, ಯಶೋಧಾ, ಮಾನಸಾ, ಪವಿತ್ರಾ, ಗೀತಾ, ಮುನಿರತ್ನಾ, ಶೋಭಾ, ತಾ.ಪಂ. ಎಡಿ ರಾಮಪ್ಪ, ವ್ಯವಸ್ಥಾಪಕ ಮಂಜುನಾಥ್​ ಇದ್ದರು.