ಜಿಲ್ಲೆ

ಪಿಂಚಣಿಗಾಗಿ ನಿವೃತ್ತ ಪ್ರಾಂಶುಪಾಲರಿಂದ 21 ವರ್ಷದ ಕಾನೂನು ಹೋರಾಟ

ಗೋಪಾಲಕೃಷ್ಣ ಪಾದೂರ್

ಉಡುಪಿ: ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಪಿಂಚಣಿ ಹಣ ಹಾಗೂ ಬಡ್ಡಿ ಗಾಗಿ ನಿವೃತ್ತ ಪ್ರಾಂಶುಪಾಲರೊಬ್ಬರು 21 ವರ್ಷದಿಂದ ಕೋರ್ಟು ಮೆಟ್ಟಲು ಸುತ್ತುತ್ತಿದ್ದರೂ ಪೂರ್ತಿ ಹಣ ಪಾವತಿಯಾಗಿಲ್ಲ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಲೆವೂರಿನ ರಘುಪತಿ ಭಟ್ ಕಾರ್ಕಳ ವೆಂಕಟರಮಣ ಪದವಿಪೂರ್ವ ಕಾಲೇಜಿನಲ್ಲಿ 33 ವರ್ಷ ಸೇವೆ ಸಲ್ಲಿಸಿ   2002ರಲ್ಲಿ ನಿವೃತ್ತರಾಗಿದ್ದರು. ಪಿಂಚಣಿ ಮಂಜೂರಾತಿಗೆ ಅವಶ್ಯವಿರುವ ದಾಖಲೆಗಳನ್ನು ಮೂರು ತಿಂಗಳ ಮೊದಲೇ ಕಾಲೇಜು ಆಡಳಿತ ಮಂಡಳಿ ವಿನಂತಿಸಿದ್ದರು. ಆದರೆ ಇಲಾಖೆ ನಿರ್ಲಕ್ಷದಿಂದಾಗಿ 15 ವರ್ಷಗಳ ಪಿಂಚಣಿ ಹಣ ಮಂಜೂರು ಆಗಲೇ ಇಲ್ಲ. ಅನಂತರ ಜಿಲ್ಲಾ ನ್ಯಾಾಯಾಲಯ ಹೈಕೋರ್ಟ್‌ವರೆಗೂ ಸುಧೀರ್ಘ  ನ್ಯಾಾಯಾಂಗ ಹೋರಾಟ ನಡೆಸಿ 2017ರಲ್ಲಿ 177 ತಿಂಗಳ ಪಿಂಚಣಿಯನ್ನು ಏಕಗಂಟಿನಲ್ಲಿ ಸಂದಾಯವಾಗಿದೆ. ಪಿಂಚಣಿ ಮೊತ್ತವನ್ನು ತಡವಾಗಿ ಪಾವತಿಸಿರುವುದಕ್ಕೆ ನಿಯಮಾನುಸಾರ ಇಲಾಖೆ 15 ವರ್ಷಗಳ ಬಡ್ಡಿಿ ಸೇರಿಸಬೇಕಿತ್ತು. ಪಿಂಚಣಿ ಇಲಾಖೆ ಅವರಲ್ಲಿ ವಿಚಾರಿಸಿದಾಗ  ಇದರ ಬಡ್ಡಿಗಾಗಿ ನೀವು ಶಿಕ್ಷಣ ಇಲಾಖೆಯನ್ನೇ ಸಂಪರ್ಕಿಸಬೇಕು ಎಂದು ಹೇಳಿದ್ದರು. 2019ರಲ್ಲಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದರು.  18 ತಿಂಗಳ ವಿಚಾರಣೆ ನಡೆಸಿದ ನ್ಯಾಾಯಲಯವು 2021ರ ಜನವರಿಯಲ್ಲಿ ತೀರ್ಪು ನೀಡಿ ಪಿಂಚಣಿ ಬಾಕಿ ಅವಧಿಗೆ ಶೇ.8 ರಂತೇ ಬಡ್ಡಿ ನೀಡುವಂತೆ ಆದೇಶಿಸಿತು. ಬಡ್ಡಿ ಪಾವತಿಗಾಗಿ ನಾಲ್ಕು ವಾರಗಳ ಗಡುವು ವಿಧಿಸಿತು. ಆದರೆ ಅಧಿಕಾರಿಗಳು ಬಡ್ಡಿ ಹಣ ಪಾವತಿಸಲಿರಲಿಲ್ಲ. ನಂತರ ಕೋರ್ಟಿನ ಅರೆಸ್ಟ್ ವಾರಂಟಿಗೆ ಹೆದರಿ ನ್ಯಾಾಯವಾಗಿ ನೀಡಬೇಕಾದ ಬಡ್ಡಿ ಮೊತ್ತದ ಅರ್ಧಕ್ಕಿಿಂತಲೂ ಕಡಿಮೆ ಹಣವನ್ನು ಅವರ ಖಾತೆಗೆ ಜಮಾ ಮಾಡಿದ್ದಾರೆ. ಬಾಕಿ ಹಣಕ್ಕಾಗಿ ನ್ಯಾಯಾಂಗ ಹೋರಾಟ ಇನ್ನು ಮುಂದುವರೆದಿದೆ ಎಂದು ಹೇಳಿದರು.

ರಘುಪತಿ ಭಟ್ ಮಾತನಾಡಿ, ನಿವೃತ್ತಿಯ ಮರು ತಿಂಗಳಲ್ಲೇ ಪಿಂಚಣಿ ಪಾವತಿಯಾಗಬೇಕು ಎಂಬುದು ಸರಕಾರದ ನಿಯಮದಲ್ಲಿ ಸ್ಪಷ್ಟವಿದೆ. ಮೊದಲು ಪಿಂಚಣಿ ಪಾವತಿಸಲು 177 ತಿಂಗಳು ತಡಮಾಡಿದರು, ತಡವಾಗಿ ಪಾವತಿಸಲಾದ ಪಿಂಚಣಿಗೆ ಶೇ.8 ಬಡ್ಡಿಿ ಪಾವತಿಸುವಂತೆ ಹೈಕೋರ್ಟ್ ಆದೇಶವಿದ್ದರೂ 63 ತಿಂಗಳ ನಂತರ ಬಡ್ಡಿ ಪಾವತಿಸಲಾಯಿತು. ಬಡ್ಡಿ ಲೆಕ್ಕಾಾಚಾರದಲ್ಲೂ ತಪ್ಪೆಸಗಿ ಅರ್ಧಕ್ಕಿಿಂತಲೂ ಕಡಿಮೆ ಪಾವತಿಮಾಡಿ ನ್ಯಾಾಯಾಲಯಕ್ಕೆ ತಪ್ಪು ಅಫಿದಾವಿತ್ ನೀಡಲಾಗಿದೆ.  80 ವರ್ಷದ ನಾನು ಈಗಾಗಗಲೆ 21 ವರ್ಷಗಳ ಹೋರಾಟ ನಡೆಸಿದ್ದೇನೆ. ಸಾಯುವವರೆಗೂ ನ್ಯಾಯಾಲಯಕ್ಕೆ ದಾವೆ ದಾಖಲಿಸುತ್ತಲೇ ಇರಬೇಕೆ? ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.