ಮಾಸ್ತಿ: ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ಲಾನುಭವಿಗಳ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಹೋಬಳಿ ಮಟ್ಟದಲ್ಲಿ ಕಂದಾಯ ಮತ್ತು ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೋಲಾರ ಜಿಲ್ಲಾಧಿಕಾರಿ ಸತ್ಯಭಾಮ ಹೇಳಿದರು.
ಮಾಲೂರು ತಾಲೂಕು ಟೇಕಲ್ ನಾಡಕಚೇರಿ ಆವರಣದಲ್ಲಿ ಕಂದಾಯ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಪಿಂಚಣಿ ಮತ್ತು ಕಂದಾಯ ಅದಾಲತ್ ಉದ್ಘಾಟಿಸಿ ಮಾತನಾಡಿದರು. ಹಳ್ಳಿ ಜನರು ತಾಲೂಕು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಹಾಗೂ ಸರ್ಕಾರಿ ಸೌಲಭ್ಯ ಮನೆ ಬಾಗಿಲಿಗೆ ತಲುಪಿಸಲು ಜಿಲ್ಲಾಡಳಿತ ಯತ್ನಿಸುತ್ತಿದೆ ಎಂದರು.
ಕಳೆದೊಂದು ವಾರದಿಂದ ಪ್ರತಿ ಕಂದಾಯ ವೃತ್ತಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮಗಳಿಗೆ ತೆರಳಿ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ವಾಹಿತಿ ನೀಡಿ ಒಟ್ಟು 364 ಅರ್ಜಿ ಸ್ವೀಕರಿಸಿದ್ದರು. ಇವುಗಳಲ್ಲಿ 104 ಅರ್ಹ ಫಲಾನುಭವಿಗಳಿಗೆ ಆದೇಶ ಪತ್ರ ಮಂಜೂರಾಗಿದೆ ಎಂದರು.
ಕೋಲಾರ ಎಸಿ ಸೋಮಶೇಖರ್ ವಾತನಾಡಿ, ಜನರಿಗೆ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಕೆಲವು ಯೋಜನೆಗಳು ಸರಳೀಕರಣವಾಗುತ್ತಿವೆ ಎಂದರು. ಜಿಲ್ಲಾಧಿಕಾರಿ ಸತ್ಯಭಾಮ ಸ್ಥಳದಲ್ಲಿಯೇ 200ಕ್ಕೂ ಹೆಚ್ಚು ಅರ್ಜಿ ಪಡೆದು, ಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಿಸಿದರು. ತಹಸೀಲ್ದಾರ್ ಮಂಜುನಾಥ್, ತಾಲೂಕು ಶಿರಸ್ತೇದಾರ್ ನಾರಾಯಣಸ್ವಾಮಿ, ನಾಡಕಚೇರಿ ಉಪತಹಸೀಲ್ದಾರ್ ಜಗನ್ನಾಥರೆಡ್ಡಿ, ಆರ್‌ಐ ಮುನಿಸ್ವಾಮಿಶೆಟ್ಟಿ ಮತ್ತಿತರರು ಇದ್ದರು.