ಹಗರಿಬೊಮ್ಮನಹಳ್ಳಿಯಲ್ಲಿ ಉಪತಹಸೀಲ್ದಾರ್ ಎಚ್.ಎಂ.ಶ್ವೇತಾಗೆ ತಾಲೂಕು ದೇವದಾಸಿಯರ ವಿಮೋಚನಾ ಸಂಘ ಮನವಿ ಸಲ್ಲಿಸಿತು. 
ಜಿಲ್ಲೆ

ಪಿಂಚಣಿ ಮೊತ್ತ 5 ಸಾವಿರ ರೂ.ಗೆ ಹೆಚ್ಚಿಸುವಂತೆ ಹಬೊಹಳ್ಳಿಯಲ್ಲಿ ದೇವದಾಸಿಯರ ವಿಮೋಚನಾ ಸಂಘ ಪ್ರತಿಭಟನೆ

Ballari

ಹಗರಿಬೊಮ್ಮನಹಳ್ಳಿ: ಮಾಸಿಕ ಪಿಂಚಣಿ ಹೆಚ್ಚಿಸುವಂತೆ ಆಗ್ರಹಿಸಿ ತಾಲೂಕು ದೇವದಾಸಿಯರ ವಿಮೋಚನಾ ಸಂಘದ ಮಂಗಳವಾರ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ, ವಿಮುಕ್ತ ದೇವದಾಸಿಯರಿಗೆ ರಾಜ್ಯ ಸರ್ಕಾರ ಪಿಂಚಣಿ ಮೊತ್ತ 5 ಸಾವಿರ ರೂ.ಗೆ ಹೆಚ್ಚಿಸಬೇಕು. ಬಾಕಿ ಸಮೇತ ಮೂರು ತಿಂಗಳ ಮಾಸಾಶನ ಮುಂಗಡ ನೀಡಬೇಕು. ಎಲ್ಲ ವಿಮುಕ್ತ ದೇವದಾಸಿಯರಿಗೆ ಪಿಂಚಣಿ ವಿಸ್ತರಣೆ ಮಾಡಬೇಕು. ಕರೊನಾ ಲಾಕ್‌ಡೌನ್ ವೇಳೆ ಬಡ ಮಹಿಳೆಯರು ಕುಟುಂಬ ನಿರ್ವಹಣೆ ಮಾಡಲು ಸಂಕಷ್ಟ ಅನುಭವಿಸಿದ್ದಾರೆ. ಆದಾಯ ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲ ಕುಟುಂಬಗಳಿಗೆ ಮಾಸಿಕ 7,500 ರೂ. 6 ತಿಂಗಳ ಕಾಲ ನೀಡಬೇಕು. ಪ್ರತಿ ಕುಟುಂಬದ ಸದಸ್ಯರಿಗೆ ಮಾಸಿಕ 10 ಕೆಜಿ ಸಮಗ್ರ ಪಡಿತರ ಕಿಟ್ ಒದಗಿಸಬೇಕು. ನರೇಗಾ ಕೂಲಿ 600 ರೂ.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಬಳಿಕ ಉಪತಹಸೀಲ್ದಾರ್ ಎಚ್.ಎಂ.ಶ್ವೇತಾಗೆ ಮನವಿ ಸಲ್ಲಿಸಲಾಯಿತು. ಸಿಪಿಎಂ ತಾಲೂಕು ಕಾರ್ಯದರ್ಶಿ ಎಸ್.ಜಗನ್ನಾಥ, ತಾಲೂಕು ಅಧ್ಯಕ್ಷೆ ಬಿ.ಮೈಲಮ್ಮ, ಮುಖಂಡರಾದ ಪಿ.ಚಾಂದಬೀ, ಕೆ.ಅಂಜಿನಮ್ಮ, ದೊಡ್ಡಬಸಮ್ಮ, ಎ.ಹನುಮಕ್ಕ, ತಟ್ನೆಮ್ಮ ಇತರರಿದ್ದರು.