ಲೇಖನಿ ಅಭಿಯಾನದಲ್ಲಿ ಭಾಗಿಯಾಗಿದ್ದ ಮಕ್ಕಳು. 
ಜಿಲ್ಲೆ

ಬಾಳೆಲೆಯಲ್ಲಿ ವಿಶ್ವ ಶಾಂತಿಗಾಗಿ ಲೇಖನಿ ಅಭಿಯಾನ

ಗೋಣಿಕೊಪ್ಪ: ಬಾಳೆಲೆ ವಿಜಯಲಕ್ಷ್ಮೀ ಪ್ರೌಢಶಾಲೆ, ಕಾಕೂರು ಜೆಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಕಳತ್‌ಮಾಡ್ ಪ್ರೌಢಶಾಲೆಯಲ್ಲಿ ವಿಶ್ವ ಶಾಂತಿಗಾಗಿ ಲೇಖನಿ ಅಭಿಯಾನ ಗುರುವಾರ ನಡೆಯಿತು.

ಶಾಲೆಯ ಮುಖ್ಯಶಿಕ್ಷಕ ಚಂದ್ರಶೇಕರ್ ಮಾತನಾಡಿದರು. ಲೇಖನಿ ಖಡ್ಗಕ್ಕಿಂತ ಹರಿತವಾದದ್ದು, ಲೇಖನಿ ಹಿಡಿಯಿರಿ ವಿಶ್ವ ಮಾನವರಾಗಿ, ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ, ಲೇಖನಿ ಹಿಡಿಯಿರಿ ವಿಶ್ವಮಾನವರಾಗಿ, ಸಮಾಜದಲ್ಲಿ ತತ್ವ ಸಿದ್ಧಾಂತವನ್ನು ಬೆಂಬಲಿಸಬೇಕು, ಶಿಕ್ಷಣ ಪ್ರತಿಯೊಬ್ಬರು ಪಡೆಯಬೇಕು, ಪ್ರತಿಯೊಬ್ಬ ಹೆಣ್ಣುಮಕ್ಕಳು ಶಿಕ್ಷಣ ಪಡೆಯಬೇಕು, ಲೇಖನಿ ಮೂಲಕ ಮಾನವೀಯ ಸಂದೇಶ, ಲೇಖನಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಸಮಾಜವನ್ನು ಶಾಂತಿ ಮಾರ್ಗದ ಕಡೆಗೆ ನಡೆಸುತ್ತದೆ ಎಂಬಿತ್ಯಾದಿ ಘೋಷವಾಕ್ಯಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು.

ಶಿಕ್ಷಕರಾದ ಎಂ.ಪಿ.ರಾಘವೇಂದ್ರ, ಡಿ.ಎನ್.ಸುಬ್ಬಯ್ಯ, ಬೆಂಡಿಕ್ಟ್ ಫನಾರ್ಂಡಿಸ್, ತಿಮ್ಮರಾಜ್, ಎ.ಎಂ.ಜಯಣ್ಣ, ಪ್ರಭುಕುಮಾರ್, ಚಂದ್ರವತಿ ಹಾಜರಿದ್ದರು. ಕಾರ್ಯಕ್ರಮದ ಸಂಚಾಲಕಿ ಕೆ.ಟಿ.ವಾತ್ಸಲ್ಯಾ ತಾವೇ ತಯಾರಿಸಿದ ಲೇಖನಿಯನ್ನು ಶಾಲೆಗೆ ನೀಡುವುದರ ಮೂಲಕ ಶಾಲೆಯ ಕಾರ್ಯಕ್ರಮ ಯಶಸ್ವಿಗೊಳಿಸಿದರು.