ಜಿಲ್ಲೆ

ದೇವಭಕ್ತಿ - ದೇಶಭಕ್ತಿ ಪರಮಧ್ಯೇಯ : ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ

ಉಪ್ಪಿನಂಗಡಿ: ದೇವ ಭಕ್ತಿ ಮತ್ತು ದೇಶಭಕ್ತಿಯ ಜೀವನವೇ ನಮ್ಮ ಪರಮಧ್ಯೇಯವಾಗಿರಬೇಕು. ಸವಾಜದಲ್ಲಿ ನಮ್ಮ ಬದುಕು ಹೇಗಿರಬೇಕು ಎನ್ನುವುದಕ್ಕೆ ಶ್ರೀ ರಾಮನ ಜೀವನಾದರ್ಶ ನಮಗೆಲ್ಲರಿಗೂ ಆದರ್ಶವಾಗಿರಲಿ. ಸವಾಜದಲ್ಲಿ ನಮ್ಮ ಬದುಕು ಹೇಗಿರಬಾರದು ಎನ್ನುವುದಕ್ಕೆ ರಾವಣನ ಜೀವನಾದರ್ಶ ನಮಗೆ ಪಾಠವಾಗಿರಲಿ ಎಂದು ಅಯೋಧ್ಯಾ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಉಪ್ಪಿನಂಗಡಿ ಶ್ರೀ ರಾಮ ಶಾಲೆಗೆ ಗುರುವಾರ ಭೇಟಿಯಿತ್ತು ಆಶೀರ್ವಚನ ನೀಡಿ, ಸಂಸ್ಕಾರಯುತ ಶಿಕ್ಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಮುಖರಾದ ಡಾ ಕೆ ಜಿ ಭಟ್, ಗೋವಿಂದ ಭಟ್ ಉದಯತಾರೆ, ಕರುಣಾಕರ ಸುವರ್ಣ, ಸುನಿಲ್ ಅನಾವು, ಯು.ಜಿ.ರಾಧಾ, ಕೆ.ಜಗದೀಶ್ ಶೆಟ್ಟಿ, ಜಯಶ್ರೀ ಜನಾದರ್ನ್, ಕೈಲಾರ್ ರಾಜಗೋಪಾಲ ಭಟ್, ಸುಧೀರ್ ವನಸುಮ, ಗುಣಕರ ಅಗ್ನಾಡಿ, ರಾಧಾಕಷ್ಣ ಬೊಳ್ಳಾವು, ಶ್ರೀನಿಧಿ ಉಪಾಧ್ಯಾಯ, ಹೇರಂಭ ಶಾಸ್ತ್ರಿ, ಉದಯ ಅತ್ರಮಜಲು, ಹರಿರಾಮಚಂದ್ರ, ಜಯಂತ ಪೊರೋಳಿ, ಸುಬ್ರಹ್ಮಣ್ಯ ಭಟ್, ಸುರೇಶ್ ಜಿ., ಅಚಲ್ ಉಬರಡ್ಕ, ಚಂದ್ರಶೇಖರ್ ಶೆಟ್ಟಿ, ಗಣರಾಜ್ ಭಟ್, ವಿಮಲಾ ತೇಜಾಕ್ಷಿ ಮೊದಲಾದವರಿದ್ದರು.