ಹುಕ್ಕೇರಿ: ತಾಲೂಕಿನ ನಿಡಸೋಸಿ ಗೇಟ್‌ನ ಹತ್ತಿರದ ವಿಜಯಲಕ್ಷ್ಮೀ ಪೇಗ್ ಬಾರ್‌ಗೆ ಶನಿವಾರ ಮುತ್ತಿಗೆ ಹಾಕಿದ ನೂರಾರು ಮಹಿಳೆಯರು ಮದ್ಯದ ಅಂಗಡಿಗೆ ಬೀಗ ಹಾಕಿ ಬಾರ್‌ನ್ನು ಇಲ್ಲಿಂದ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಬಾರ್‌ನಿಂದ ಬಡವರ ಮನೆ ಹಾಳಾಗಿವೆ. ಯುವಕರು ಕುಡಿದು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಬಾರ್‌ನ್ನು ಇಲ್ಲಿಂದ ತೆರವುಗೊಳಿಸಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳೇ ಕಾರಣ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಬಾರ್‌ನಲ್ಲಿ ಮದ್ಯ ಕುಡಿದ ಕುಡುಕರು ರಸ್ತೆ ಮೇಲೆಯೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಕೆಲವರು ಬಟ್ಟೆ ಬಿಚ್ಚಿಕೊಂಡು ನಿಲ್ಲುತ್ತಾರೆ. ಇದರಿಂದ ಕಾಲೇಜಿಗೆ ತೆರಳುವ ವಿದ್ಯಾರ್ಥಿನಿಯರು ಹಾಗೂ ಊರುಗಳಿಗೆ ತೆರಳುವ ಮಹಿಳೆಯರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಸಮಸ್ಯೆ ಹೇಳಿಕೊಂಡರು.
ಅಬಕಾರಿ ಇನ್ಸ್‌ಪೆಕ್ಟರ್ ವಿಜಯ ಮೆಳವಂಕಿಗೆ ಮನವಿ ಸಲ್ಲಿಸಲಾಯಿತು.
ತಾಪಂ ಮಾಜಿ ಸದಸ್ಯೆ ಸಿ.ಎಸ್. ಮಗದುಮ್ಮ, ಗ್ರಾಪಂ ಅಧ್ಯಕ್ಷೆ ಶಾಂತವ್ವ ನಾಗನೂರಿ, ಗ್ರಾಪಂ ಮಾಜಿ ಅಧ್ಯಕ್ಷೆ ರೇಷ್ಮಾ ಡಾಳಿ, ಸುವರ್ಣಾ ಹುಣಶ್ಯಾಳಿ, ಸೀ ಶಕ್ತ್ತಿ ಸಂಘದ ಅಧ್ಯಕ್ಷೆ ಲಕ್ಷ್ಮೀ ಝಲ್ಪಿವಾಡೆ, ಮಂಜುಳಾ ನಡುಗೇರಿ, ಸುರೇಶ ಕುಲಕರ್ಣಿ, ಬಸವಣ್ಣಿ ನಾಗನೂರಿ, ಅಜಿತ್ ಡಾಳಿ, ಶಂಕರ ಹೆಗಡೆ ಸೇರಿ ನೂರಾರು ಜನರಿದ್ದರು. 10-1