ಜಿಲ್ಲೆ

ಸೌಹಾರ್ದ ಸಭೆ ಇಂದು

ಲಲಾಟಾಕ್ಷ ಎಸ್

ಸಿದ್ದಾಪುರ: ಹುತಾತ್ಮ ದಿನದ ಅಂಗವಾಗಿ ಜ.30ರಂದು ಬಸ್ ನಿಲ್ದಾಣ ಬಳಿ ಸಂಜೆ 5 ಗಂಟೆಗೆ ಸೌಹಾರ್ದ ಸಭೆ ಮತ್ತು ಮಾನವ ಸರಪಳಿ ರಚಿಸಲಾಗುವುದು ಎಂದು ಸೌಹಾರ್ದ ವೇದಿಕೆ ತಿಳಿಸಿದೆ.


ಬ್ಯಾಂಕ್ ಆಫ್ ಬರೋಡಾ ಮುಂಭಾಗದಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿ ನಂತರ ಮಾನವ ಸರಪಳಿ ರಚಿಸಲಾಗುವುದು. ನಾಡಿನ ಸೌಹಾರ್ದ ಪರಂಪರೆ, ಶಾಂತಿ, ಸಾಮರಸ್ಯಗಳನ್ನು ಉಳಿಸ ಬಯಸುವ ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ದೇಶದಲ್ಲಿ ಶಾಂತಿ ಸೌಹಾರ್ದತೆಗೆ ಧಕ್ಕೆ ಉಂಟಾಗುತ್ತಿರುವ ಸಂದರ್ಭದಲ್ಲಿ ಕುವೆಂಪು ಹೇಳಿಕೆಯಂತೆ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಮಾತಿನಂತೆ ಸೌಹಾರ್ದತೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಬಿ.ಆರ್.ಭರತ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಮಾನವ ಬಂಧುತ್ವ ವೇದಿಕೆ ಮಂಗಳೂರು ವಿಭಾಗ ಸಂಚಾಲಕ ಕೆ.ಎಸ್.ಸತೀಸ್ ಕುಮಾರ್ ಭಾಗವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಅಧ್ಯಕ್ಷ ಎಂ.ಬಿ.ಕುಟ್ಟಪ, ಸಿದ್ದಾಪುರ ಗ್ರಾಂಪಂ ಉಪಾಧ್ಯಕ್ಷ ಪಳನಿ ಸ್ವಾಮಿ, ದಲಿತ ಸಂಘಟನೆಯ ರವಿ, ನಾಗರಿಕ ಹೋರಾಟ ಸಮಿತಿಯ ಎಚ್.ಬಿ.ರಮೇಶ್, ಪ್ರೇಮಾ ಹಾಜರಿದ್ದರು.