ಹಗರಿಬೊಮ್ಮನಹಳ್ಳಿ: ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದವರ ಮೇಲಿನ ಲಾಠಿ ಚಾರ್ಜ್ ಖಂಡಿಸಿ ಸಮುದಾಯದ ತಾಲೂಕು ಮತ್ತು ಜಿಲ್ಲಾ ಸಮಿತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.
ಸಮಾಜದ ರಾಜ್ಯ ಮಾಜಿ ಗೌರವ ಅಧ್ಯಕ್ಷ ಬಾವಿ ಬೆಟ್ಟಪ್ಪ ಮಾತನಾಡಿ, 2ಎ ಮೀಸಲಾತಿ ಬೇಡಿಕೆ ಈಡೇರಿಸುವಂತೆ ಹಿಂದಿನ ಸರ್ಕಾರಗಳಿಗೆ ಒತ್ತಾಯಿದ್ದೆವು. ಆದರೆ, ಮೀನಮೇಷ ಎಣಿಸಿದವು. ಈಗ ಮಠಾಧೀಶರ ನೇತೃತ್ವದಲ್ಲಿ ನಡೆಸಿದ್ದ ಶಾಂತಿಯುತ ಪ್ರತಿಭಟನೆಗೆ ಭಂಗ ತಂದಿದ್ದು ಅಲ್ಲದೆ, ಏಕಾಏಕಿ ಲಾಠಿ ಪ್ರಹಾರ ಮಾಡಿ, ಹೋರಾಟ ಹತ್ತಿಕ್ಕುವ ಹುನ್ನಾರ ಮಾಡಿದ ಸರ್ಕಾರಕ್ಕೆ ನಾಚಿಕೆಯಾಗಬೇಕು. ಸಮುದಾಯಕ್ಕೊಂದು ತಾಳ್ಮೆ ಇದೆ. ಮೃದುವಾದ ಮಾತುಗಳಿಂದ ಬೇಡಿಕೆಯನ್ನಿಟ್ಟಿದ್ದು, ಈಡೇರಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಭದ್ರವಾಡಿ ಚಂದ್ರಶೇಖರ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಸಮುದಾಯದ ಮೇಲೆ ಗೂಂಡಾವರ್ತನೆ ಮಾಡಿದ್ದು ಅಕ್ಷಮ್ಯ ಅಪರಾಧ. ಸಿಎಂ ಅವರು ಸ್ವಾಮೀಜಿ ಮತ್ತು ಸಮುದಾಯದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಸಮುದಾಯದ ರಾಜ್ಯ ಹಿರಿಯ ಉಪಾಧ್ಯಕ್ಷ ಹನಸಿ ಸಿದ್ದೇಶ, ತಾಲೂಕು ಅಧ್ಯಕ್ಷ ಅಕ್ಕಿ ಶಿವಣ್ಣ, ಹಿರಿಯರಾದ ವೈ.ಮಲ್ಲಿಕಾರ್ಜುನ, ಬೆಣಕಲ್ ಪ್ರಕಾಶ, ಕುಂಟೂರು ನಾಗರಾಜ ಮಾತನಾಡಿದರು. ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು. ಉಪ ತಹಸೀಲ್ದಾರ್ ಶಿವಕುಮಾರ ಗೌಡಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೊನ್ನದ್ ಗುರುಬಸವರಾಜ, ತಾಲೂಕು ಯುವ ಘಟಕದ ಅಧ್ಯಕ್ಷ ಎಸ್.ಎ.ಸಂತೋಷ, ಮಹಿಳಾ ಘಟಕದ ಪದಾಧಿಕಾರಿಗಳಾದ ಮಂಜುಳಾ ಗೌಡ್ರು, ನಿರ್ಮಲಾ ಮೆಣಸಿಗಿ, ವಾಣಿಗೌಡ, ಸೌಮ್ಯಗೌಡ್ರು, ರುದ್ರಮ್ಮ, ಗೀತಾ, ಶಾಂತಮ್ಮ, ಎ.ಗೌತಮಿ, ರೇಖಾ ಗೌಡ್ರು, ಜಾಹ್ನವಿ, ಕರಿಬಸಮ್ಮ, ಪ್ರಮುಖರಾದ ಮಂಜುನಾಥ ಗೌಡ, ಕುಂಟೂರು ನಿಂಗಣ್ಣ, ಇಟ್ಟಿಗಿ ಕಲ್ಲೇಶಪ್ಪ, ನೇತಾಜಿ ಗೌಡ, ಡಾ.ಕುಮಾರ ನೆಲ್ಕುದ್ರಿ, ಫೋಟೋ ವೀರೇಶ, ನಟರಾಜ ಬಾದಾಮಿ, ನಾಗರಾಜ, ನವೀನ ಎಲೆಗಾರ, ಚಂದ್ರಶೇಖರ ಪಾಟೀಲ್, ವಟ್ಟಮ್ಮನಹಳ್ಳಿ ವೀರೇಶ, ಕೊಟ್ರೇಶ, ಎನ್.ಮಲ್ಲಿಕಾರ್ಜುನ, ಜ್ಯೋತೆಪ್ಪ, ಶಿವಶಂಕರಗೌಡ, ದೇವಿಪ್ರಸಾದ ಇತರರಿದ್ದರು.