ಕಂಪ್ಲಿಯಲ್ಲಿ ಬಿಜೆಪಿ ಮಂಡಲ ಪದಾಧಿಕಾರಿಗಳು ತಹಸೀಲ್ದಾರ್ ಜೂಗಲ ಮಂಜುನಾಯಕಗೆ ಮನವಿ ಸಲ್ಲಿಸಿದರು. ಪ್ರಮುಖರಾದ ಸಿ.ಡಿ.ಮಹದೇವ, ವೈ.ಮುರಳಿಮೋಹನರೆಡ್ಡಿ, ಕಟ್ಟೆ ವಿಶ್ವನಾಥ, ಕೆ.ಬಸವಪ್ರಭು, ಜಿ.ಶ್ರೀನಿವಾಸ್ ಇತರರಿದ್ದರು. 
ಜಿಲ್ಲೆ

ಶಾಂತಿ-ಸುವ್ಯವಸ್ಥೆ ಕದಡುವ ಯತ್ನ

ಕಂಪ್ಲಿ: ಧರ್ಮಸ್ಥಳ ಕುರಿತು ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಮಂಡಲದಿಂದ ಶುಕ್ರವಾರ ಪ್ರತಿಭಟನೆ ರ‌್ಯಾಲಿ ನಡೆಸಿ, ತಹಸೀಲ್ದಾರ್ ಜೂಗಲ ಮಂಜುನಾಯಕಗೆ ಮನವಿ ಸಲ್ಲಿಸಲಾಯಿತು.

ಮಂಡಲ ಅಧ್ಯಕ್ಷ ಸಿ.ಡಿ.ಮಹದೇವ ಮಾತನಾಡಿ, ಕೆಲವರು ದುರುದ್ದೇಶದಿಂದ ಧರ್ಮಸ್ಥಳದ ಪಾವಿತ್ರ್ಯ ಹಾಳು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ, ಸಾರ್ವಜನಿಕವಾಗಿ ನಿರಂತರ ಸುಳ್ಳು ಆರೋಪದ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ.

ಇದರಿಂದ ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವಾಗಿದೆ. ಸಮಾಜದ ಶಾಂತಿ, ಸುವ್ಯವಸ್ಥೆ ಕದಡುವ ಪ್ರಯತ್ನವಾಗಿದ್ದು ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಧರ್ಮಸ್ಥಳದ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುತ್ತಿರುವ ವ್ಯಕ್ತಿ, ಸಂಘಟನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಪ್ರಮುಖರಾದ ವೈ.ಮುರಳಿಮೋಹನರೆಡ್ಡಿ, ಕಟ್ಟೆ ವಿಶ್ವನಾಥ, ಕೆ.ಬಸವ ಪ್ರಭು, ಜಿ.ಶ್ರೀನಿವಾಸ್, ಟಿ.ವಿ.ಸುದರ್ಶನರೆಡ್ಡಿ, ಮನೋಜಗೌಡ, ಎಸ್.ಎಂ.ನಾಗರಾಜ, ಕೆ.ರಂಗಪ್ಪ ಬಡಿಗೇರ್ ವೀರೇಶ್, ವೆಂಕಟೇಶ್, ದೂಪದ ಸುಭಾಷ್‌ಚಂದ್ರ, ಕನಕಗಿರಿ ಪ್ರಶಾಂತ್ ಇತರರಿದ್ದರು.