ಬೆಳಗಟ್ಟಿ ಗ್ರಾಮದಲ್ಲಿ ಶ್ರೀ ಹಜರತ್ ಸೈಯದ್ ಶಾಹ ಮುಸ್ತಫಾಖಾದ್ರಿ ಉರುಸು ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಪಿಎಸ್‌ಐ ಪ್ರಹ್ಲಾದ್ ನಾಯಕ ಮಾತನಾಡಿದರು. ಹಜರತ್ ಸೈಯದ್ ಶಾಹ ಮಹೆಬೂಬ ಖಾದ್ರಿ ಗುರುಗಳು, ಪ್ರಮುಖರಾದ ಹೊನ್ನಪ್ಪಗೌಡ ಪಾಟೀಲ್, ವಿಷ್ಣು ಹಾಳಕೇರಿ ಇದ್ದರು. 
ಜಿಲ್ಲೆ

ಶಾಂತಿ ಸೌಹಾರ್ದದಿಂದ ಉರುಸು ಆಚರಿಸಿ

Kopala - Desk - Eraveni

ಅಳವಂಡಿ: ಗ್ರಾಮದಲ್ಲಿ ಹಿಂದು, ಮುಸ್ಲಿಂ ಸಮುದಾಯದವರು ಒಗ್ಗಟ್ಟಿನಿಂದ ಉರುಸು ಆಚರಿಸುವುದು ಭಾವೈಕ್ಯತೆಗೆ ಸಾಕ್ಷಿಯಾಗಿದೆ ಎಂದು ಪಿಎಸ್‌ಐ ಪ್ರಹ್ಲಾದ್ ನಾಯಕ ತಿಳಿಸಿದರು.

ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಹಜರತ್ ಸೈಯದ್ ಶಾಹ ಮುಸ್ತಫಾಖಾದ್ರಿ ಅವರ 222ನೇ ಉರುಸು ಕಾರ್ಯಕ್ರಮದ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಮಾ.14ರವರೆಗೆ ಉರುಸು ನಡೆಯಲಿದೆ. ಭಕ್ತರು ಶಾಂತಿಯಿಂದ ಸಹಕಾರ ನೀಡಬೇಕು. ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಶಾಂತಿ ಸುವ್ಯವಸ್ಥೆ, ರಕ್ಷಣೆ ಮತ್ತು ಸಂಚಾರ ವ್ಯವಸ್ಥೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು. ಶಾಂತಿ ಸೌಹಾರ್ದದಿಂದ ಉರುಸು ಆಚರಣೆ ಮಾಡಬೇಕು ಎಂದರು.

ಹಜರತ್ ಸೈಯದ್ ಶಾಹ ಮಹೆಬೂಬ ಖಾದ್ರಿ ಗುರುಗಳು, ಪ್ರಮುಖರಾದ ಹೊನ್ನಪ್ಪಗೌಡ ಪಾಟೀಲ್, ವಿಷ್ಣು ಹಾಳಕೇರಿ, ಮೋದಿನಸಾಬ ಆಲೂರು, ಜಂಗ್ಲಿಸಾಬ ಒಂಟಿ, ಗೂಡುಸಾಬ ಅಡವಿಸೋಮಾಪೂರ, ಗುಡದಪ್ಪ ಚಿಲವಾಡಗಿ, ಕರೀಮಸಾಬ ಆಲೂರು, ಮುಸ್ತುಸಾಬ ಕೆಂಪಸಾಬಣ್ಣನವರ,

ಬಸನಗೌಡ ಪಾಟೀಲ, ದೇವೇಂದ್ರಗೌಡ ಪಾಟೀಲ, ಜಗನ್ನಾಥ ಪುರದ, ಶಿವನಗೌಡ ಪಾಟೀಲ, ದಾವಲಸಾಬ ಹಾತಲಗೇರಿ, ರಾಜಾಭಕ್ಷಿ ಹಡಗಲಿ, ಬಸವಂತಪ್ಪ ಗದ್ದಿ, ಬಸಪ್ಪ ತಳವಾರ ಪೊಲೀಸ್ ಸಿಬ್ಬಂದಿ ಮಲ್ಲೇಶಪ್ಪ, ಗಿರಿಗೌಡ ಇತರರಿದ್ದರು.