ಜಿಲ್ಲೆ

ಶಾಂತಿ ಸೌಹಾರ್ದದಿಂದ ಬಕ್ರೀದ್ ಆಚರಿಸಿ

Gangavati - Desk - Veeresh S Ullagaddi

ಸಿರವಾರ: ಬಕ್ರೀದ್ ಆದಿಯಾಗಿ ಎಲ್ಲ ಹಬ್ಬಗಳನ್ನು ಕಾನೂನಿನ ಅಡಿಯಲ್ಲಿ ಆಚರಿಸಬೇಕು ಎಂದು ಸಿಪಿಐ ಶಶಿಕಾಂತ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಬುಧವಾರ ಮಾತನಾಡಿದರು.

ಹಿಂದು-ಮುಸ್ಲಿಮರು ಒಗ್ಗಟ್ಟಾಗಿ ಶಾಂತಿಯಿಂದ ಹಬ್ಬ ಆಚರಿಸಬೇಕು. ಶಾಂತಿಗೆ ಭಂಗ ತಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮುಂಜಾಗ್ರತೆಗಾಗಿ ಪೊಲೀಸರನ್ನು ನಿಯೋಜಿಸಿದ್ದು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಪಿಎಸ್‌ಐ ಅವಿನಾಶ್, ಪಪಂ ಸದಸ್ಯರಾದ ಕೃಷ್ಣಾನಾಯಕ, ಎಚ್.ಮಾರ್ಕಪ್ಪ, ಮೌಲಾಸಾಬ್, ಅಮರೇಶ ಗಡ್ಲ್, ಧರ್ಮ ಗುರುಗಳಾದ ಖಾಜಿ ಮಂಜೂರು ಪಾಷಾ, ಇಬ್ರಾಹಿಂ, ಮುಖಂಡರಾದ ಉದಯ ಸಾಹುಕಾರ್ ಸಾಹುಕಾರ್, ವೆಂಕಟೇಶ ದೊರೆ, ನವಾಜ್, ಹರಳಪ್ಪ ಯದ್ದಲದಿನ್ನಿ, ಮೆಹಬೂಬ್ ಸಾಬ್ ದೊಡ್ಡಮನಿ, ಖಾಸಿಂಸಾಬ್, ನಬೀಸಾಬ್ ಇತರರಿದ್ದರು.