ಜಿಲ್ಲೆ

ದೇವರ ನಾಮಸ್ಮರಣೆಯಿಂದ ನೆಮ್ಮದಿ

ವಿದ್ಯಾ ಶೆಟ್ಟನಗೌಡ್ರ

ಅಥಣಿ: ವಿಠ್ಠಲ ದೇವರ ನಾಮಸ್ಮರಣೆ ಮಾಡುವುದರಿಂದ ಬದುಕಿನಲ್ಲಿ ಮಾನಸಿಕ ನೆಮ್ಮದಿ, ಶಾಂತಿ, ಸಮಾಧಾನ ಲಭಿಸುತ್ತದೆ. ಜತೆಗೆ ಹೃದಯ ಸಂಬಂಧಿ ಕಾಯಿಲೆ ದೂರವಾಗುತ್ತವೆ ಎಂದು ಹರಿಸಂತ ಅಣ್ಣಾಸಾಹೇಬ ಮಿರಜಕರ ಹೇಳಿದರು.

ಪಟ್ಟಣದ ಹರಿಮಂದಿರದಲ್ಲಿ ಶುಕ್ರವಾರ ೫೦ನೇ ವರ್ಷದ ಪಂಢರಪುರ ದಿಂಡಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಗುರು ಹರಿದಾಸ ರಾಮಭಾವು ಭೋರಾಟ ಘಡ ಪ್ರಮುಖರು ಮತ್ತು ಗುರು ಬಾಬಾಸಾಹೇಬ ಅಜರೇಕರ ಅವರ ನೇತೃತ್ವದಲ್ಲಿ ಅಥಣಿಯಿಂದ ಗೂಗವಾಡ ಮಾರ್ಗವಾಗಿ ಪಂಢರಪುರಕ್ಕೆ ಪಾದಯಾತ್ರೆ ಬೆಳೆಸಿತು. ಭಜನೆ, ಹರಿನಾಮ. ಬೆಳಗ್ಗೆ ೮ ಗಂಟೆಗೆ ಶ್ರೀ ನಾಮದೇವ ಹರಿ ಮಂದಿರದಲ್ಲಿ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ, ಭಜನೆ ಸಲ್ಲಿಸಿ ೩೦೦ಕ್ಕೂ ಅಧಿಕ ಭಕ್ತರು ಪಾದಯಾತ್ರೆ ಬೆಳೆಸಿದರು.

ರಾಜಾರಾಮ ಪಾಟೀಲ, ಶ್ರೀಕಾಂತ ಪಾಟೀಲ, ಜ್ಞಾನೇಶ್ವರ ಅಂಬೆಕರ, ರಾಮ ಅಂಬೇಕರ, ಹರಿಶ ವಾವಳ, ಮಲ್ಲಕಾರ್ಜುನ ಮಾಳಿ, ಪ್ರದೀಪ ಅಂಬೇಕರ, ಸುರೇಖಾ ತಾಂಬಟ, ವಿಲಾಸ ಪಾಟೀಲ, ಅಶೋಕ ಮೊಹಿತ ಇತರರಿದ್ದರು.