ಲೋಕಕಲ್ಯಾಣಾರ್ಥ ಹಮ್ಮಿಕೊಂಡಿರುವ ಧರ್ಮ ಸಮಾರಂಭದ ಪೂರ್ವ ಪ್ರಕಟಣೆ ಪತ್ರಿಕೆಯನ್ನು ಶ್ರೀ ರೇವಣ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆಗೊಳಿಸಿದರು. ಹಾಲಸ್ವಾಮಿ ಶಾಸ್ತ್ರಿ, ರಾಜುಗೌಡ ಪಾಟೀಲ ಇತರರಿದ್ದರು. 
ಜಿಲ್ಲೆ

ಧರ್ಮ ಕಾರ್ಯಗಳಿಂದ ಶಾಂತಿ, ಸಮಾಧಾನ

Shivamogga - Desk - Vinayakumar D B

ಸೊರಬ: ಅಸಮಾಧಾನ ಬೆಳೆಯುತ್ತಿರುವ ಸಂದರ್ಭದಲ್ಲಿ ಸಮಾಜದಲ್ಲಿ ಧರ್ಮ, ಸಂಸ್ಕೃತಿ, ಸಾಮರಸ್ಯ ನೆಲೆಸಬೇಕಾಗಿದೆ. ಧರ್ಮ ಕಾರ್ಯಗಳಲ್ಲಿ ತೊಡಗುವುದರಿಂದ ಶಾಂತಿ, ಸಮಾಧಾನ ದೊರೆಯುತ್ತದೆ ಎಂದು ದುಗ್ಲಿ-ಕಡೇನಂದಿಹಳ್ಳಿ ಮಠದ ಶ್ರೀ ರೇವಣ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ತಾಲೂಕಿನ ಬಂಕಸಾಣ ಗ್ರಾಮದ ಶ್ರೀ ಹೋಳಿಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ಜ.30ರಿಂದ ಫೆ.1ರವರೆಗೆ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದಿಂದ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡಿರುವ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾರುದ್ರಯಜ್ಞ, ಧರ್ಮ ಸಮಾರಂಭದ ಪೂರ್ವ ಪ್ರಕಟಣೆ ಪತ್ರಿಕೆ ಬಿಡುಗಡೆ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಬುಧವಾರ ಸಂಜೆ ಮಾತನಾಡಿದರು.
ದುರ್ಭಿಕ್ಷೆ, ಬರಗಾಲ, ಸಮಸ್ತ ವಿಷಪೂರಿತ ವೈರಾಣು ನಿರ್ಮೂಲನೆಗಾಗಿ ಭಗವಂತನಲ್ಲಿ ಪ್ರಾರ್ಥಿಸಿ ಕ್ಷೇತ್ರದ ಹಾಗೂ ಸಮಸ್ತರ ಸರ್ವಾಂಗೀಣ ಅಭಿವೃದ್ಧಿಗಾಗಿ ಮಹಾರುದ್ರ ಯಾಗವನ್ನು ಪುರೋಹಿತ ಬಳಗ ಹಮ್ಮಿಕೊಳ್ಳಲಾಗಿದೆ. ಫೆ.1ರಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಮಹಾರುದ್ರಯಾಗದ ಪೂರ್ಣಾಹುತಿ, ಸಂಜೆ ಧರ್ಮ ಸಮಾರಂಭ ಜರುಗಲಿದೆ ಎಂದರು.
ಸೊರಬ ತಾಲೂಕ ಪುರೋಹಿತ ಘಟಕದ ಅಧ್ಯಕ್ಷ ಹಾಲಸ್ವಾಮಿ ಶಾಸ್ತ್ರಿ, ಹೊಳೆಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರಾಜುಗೌಡ ಪಾಟೀಲ್ ಬಂಕಸಾಣ ಇತರರಿದ್ದರು.