ಯಲಬುರ್ಗಾ ತಾಪಂ ಸಭಾಂಗಣದಲ್ಲಿ ಗ್ರಾಪಂ ಪಿಡಿಒಗಳಿಗೆ ಹಮ್ಮಿಕೊಂಡಿದ್ದ ಖಜಾನೆ-2 ತರಬೇತಿ ಕಾರ್ಯಾಗಾರವನ್ನು ತಾಪಂ ಇಒ ಸಂತೋಷ್ ಪಾಟೀಲ್ ಉದ್ಘಾಟಿಸಿದರು. ಜಿಲ್ಲಾ ಖಜಾನೆ ಇಲಾಖೆ ಸಹಾಯಕ ನಿರ್ದೇಶಕ ತಿರುಪತೆಪ್ಪ ದೇವರಮನಿ, ಸಹಾಯಕ ಖಜಾನೆ ಅಧಿಕಾರಿಗಳಾದ ಬಸವರಾಜ ಮುಡಿಯಪ್ಪನವರ, ಮೋಹನ ಇದ್ದರು.  
ಜಿಲ್ಲೆ

ಪಿಡಿಒಗಳಿಗೆ ಖಜಾನೆ-2 ತರಬೇತಿ ಕಡ್ಡಾಯ

Kopala - Desk - Eraveni

ಯಲಬುರ್ಗಾ: ಗ್ರಾಪಂ ವ್ಯವಹಾರಗಳು ಖಜಾನೆ-2 ಪಿಎಂಎಸ್ ಮೂಲಕ ನಡೆಯಲಿದ್ದು, ಪಿಡಿಒಗಳು ಕಡ್ಡಾಯ ತರಬೇತಿ ಪಡೆಯಬೇಕು ಎಂದು ತಾಪಂ ಇಒ ಸಂತೋಷ ಪಾಟೀಲ್ ಹೇಳಿದರು.

ಇದನ್ನೂ ಓದಿ:http://ಪಿಡಿಒಗಳಿಗೆ ಖಜಾನೆ-2 ತರಬೇತಿ ಕಡ್ಡಾಯ
ಪಟ್ಟಣದ ತಾಪಂ ಸಭಾಂಗಣದಲ್ಲಿ ಖಜಾನೆ ಇಲಾಖೆಯಿಂದ ಯಲಬುರ್ಗಾ, ಕುಕನೂರು ಹಾಗೂ ಕುಷ್ಟಗಿ ತಾಲೂಕು ವ್ಯಾಪ್ತಿಯ ಗ್ರಾಪಂ ಪಿಡಿಒಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಖಜಾನೆ-2 ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೂರು ತಾಲೂಕಿನ ಪಿಡಿಒಗಳಿಗೆ ತರಬೇತಿ ನೀಡಲಾಗುತ್ತಿದ್ದು, ಸದುಪಯೋಗಪಡೆಯಬೇಕು. ತಮಗಿರುವ ಎಲ್ಲ ಗೊಂದಲಗಳಿಗೆ ತರಬೇತಿಯಲ್ಲಿ ಖಜಾನೆ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕು ಎಂದು ತಿಳಿಸಿದರು.

ಜಿಲ್ಲಾ ಖಜಾನೆ ಇಲಾಖೆ ಸಹಾಯಕ ನಿರ್ದೇಶಕ ತಿರುಪತೆಪ್ಪ ದೇವರಮನಿ, ಸಹಾಯಕ ಖಜಾನೆ ಅಧಿಕಾರಿಗಳಾದ ಬಸವರಾಜ ಮುಡಿಯಪ್ಪನವರ, ಮೋಹನ, ಗಂಗಾಧರ, ಮುಖ್ಯ ಲೆಕ್ಕಿಗ ಶಿವಾನಂದ ಸಜ್ಜನ ಹಾಗೂ ತಾಪಂ ಸಹಾಯಕ ಲೆಕ್ಕಾಧಿಕಾರಿ ಇತರರಿದ್ದರು.