ಕಂಪ್ಲಿಯಲ್ಲಿ ರಾಜ್ಯ ಗ್ರಾಪಂ ಕಾರ್ಯದರ್ಶಿ ಗ್ರೇಡ್-1,2 ಹಾಗೂ ದ್ವಿತೀಯ ದರ್ಜೆ ಲೆಕ್ಕಸಹಾಯಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಪದಾಧಿಕಾರಿಗಳು ಶಾಸಕ ಜೆ.ಎನ್.ಗಣೇಶ್‌ಗೆ ಮನವಿ ಸಲ್ಲಿಸಿದರು. ಪ್ರಮುಖರಾದ ವಿ.ಕೆ.ನಾಗರಾಜರಾವ್, ಎಚ್.ಹುಲುಗಪ್ಪ, ದೊಡ್ಡಬಸಪ್ಪ, ಶಿವಪ್ಪ, ಹೊನ್ನೂರಸ್ವಾಮಿ ಇತರರಿದ್ದರು. 
ಜಿಲ್ಲೆ

ಪಿಡಿಒ ಹುದ್ದೆ ಮುಂಬಡ್ತಿ ನೀಡಲು ಒತ್ತಾಯ

ರುದ್ರಪ್ಪ ವಾಲಿ

ಕಂಪ್ಲಿ: ಕಲ್ಯಾಣ ಕರ್ನಾಟಕದ ವ್ಯಾಪ್ತಿಯ ಗ್ರಾಪಂ ಗ್ರೇಡ್-1 ಕಾರ್ಯದರ್ಶಿಗಳಿಗೆ 24 ಜಿಲ್ಲೆಗಳಲ್ಲಿ ಪಿಡಿಒ ಹುದ್ದೆಗೆ ಶೇ.8 ಮುಂಬಡ್ತಿ ನೀಡುವಂತೆ ಆಗ್ರಹಿಸಿ ಶಾಸಕ ಜೆ.ಎನ್.ಗಣೇಶ್‌ಗೆ ರಾಜ್ಯ ಗ್ರಾಪಂ ಕಾರ್ಯದರ್ಶಿ ಗ್ರೇಡ್-1 ಮತ್ತು 2 ಹಾಗೂ ದ್ವಿತೀಯ ದರ್ಜೆ ಲೆಕ್ಕಸಹಾಯಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಪದಾಧಿಕಾರಿಗಳು ಬುಧವಾರ ಮನವಿ ಸಲ್ಲಿಸಿದರು.

ತಾಲೂಕು ಅಧ್ಯಕ್ಷ ವಿ.ಕೆ.ನಾಗರಾಜರಾವ್ ಮಾತನಾಡಿ, ಪಿಡಿಒ ಹುದ್ದೆ ಮೇಲ್ದರ್ಜೆಗೇರಿಸಿ 2023ರ ಮಾರ್ಚ್‌ನಿಂದ ರಾಜ್ಯಮಟ್ಟದ ಹುದ್ದೆಯಾಗಿ ಆದೇಶ ಮಾಡಿದೆ. ಗ್ರೇಡ್-1 ಕಾರ್ಯದರ್ಶಿಯಿಂದ ಪಿಡಿಒ ಹುದ್ದೆಗೆ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ರಾಜ್ಯಮಟ್ಟದ ಮುಂಬಡ್ತಿ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಿಡಿಒ ಸಂಖ್ಯೆಗೆ ಅನುಗುಣವಾಗಿ ಕಕ ಭಾಗದವರಿಗೆ ಶೇ.8 ಮುಂಬಡ್ತಿ ನೀಡುವಂತೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಚಿವರಿಗೆ ಶಿಫಾರಸು ಪತ್ರ ನೀಡುವಂತೆ ಒತ್ತಾಯಿಸಿದರು.