ಜಿಲ್ಲೆ

ಹೊಲನಗದ್ದೆ ಪಿಡಿಒ ನಾಗರಾಜ ನಾಯ್ಕಗೆ ಪ್ರಶಸ್ತಿ

Uttara Kannada - Subash Hegde

ಕಾರವಾರ:ನಗರದ ಜಿಲ್ಲಾ ಪಂಚಾಯತ ಕೇಸ್ವಾನ್ ಹಾಲ್‌ನಲ್ಲಿ ಜುಲೈ-2025 ಮಾಹೇಯ “ಬೇಸ್ಟ ಪಿಡಿಓ ಆಪ್ ದಿ ಮಂತ್” ಪ್ರಶಸ್ತಿಗೆ ಭಾಜನರಾದ ಕುಮಟಾ ತಾಲೂಕಿನ ಹೊಲನಗದ್ದೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ನಾಗರಾಜ ತಿಮ್ಮಪ್ಪ ನಾಯ್ಕ ಅವರಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ ಬುಧವಾರ ಪ್ರಶಸ್ತಿ ನಿಡಿ, ಅಭಿನಂದಿಸಿದರು.

ನಂತರ ಮಾತನಾಡಿದ ಸಿಇಓ ಉತ್ತರ ಕನ್ನಡ ಜಿಲ್ಲಾ ಪಂಚಾಯತನ ಎಲ್ಲ ಪಿಡಿಓಗಳು ತುಂಬ ಚೆನ್ನಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಜಿಲ್ಲಾ ಪಂಚಾಯತ ಕರ್ನಾಟಕದ ಪ್ರಮುಖ ಐದರಲ್ಲಿ ಒಂದು ಎಂದು ಗುರುತಿಸಲು ಪಿಡಿಓಗಳ ಕಾರ್ಯ ಮಹತ್ತರವಾಗಿದೆ. ಹಾಗಾಗಿ ಅವರುಗಳನ್ನು ಗುರುತಿಸಿ ಸತ್ಕಾರ ಮಾಡಿ, ಅಭಿನಂದಿಸುವುದರಿಂದ ಎಲ್ಲರಲ್ಲಿ ಕಾರ್ಯಪ್ರವರ್ತತೆ ಹೆಚ್ಚಿಸಲು ಸಾಧ್ಯವೆಂದು ಹೇಳಿದರು.

ಈ ಸಂಧರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಕರೀಂ ಆಸದಿ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಎಮ್ ಹಬೀಬ್, ಮುಖ್ಯ ಯೋಜನಾಧಿಕಾರಿ ಸೋಮಶೇಖರ ಮೇಸ್ತಾ ಸೇರಿದಂತೆ ಜಿಲ್ಲಾ ಪಂಚಾಯತನ ಸಿಬ್ಬಂಧಿಗಳು ಉಪಸ್ಥಿತರಿದ್ದರು.