ಕೊಪ್ಪ: ಹಿರೇಕೊಡಿಗೆ ಗ್ರಾಪಂ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಸಂಬಂಧಿಸಿದಂತೆ2015ರ ಅಕ್ಟೋಬರ್ 14ರಂದು ನಡೆದ ಪಂಚಾಯಿತಿ ಸಾಮಾನ್ಯ ಸಭೆಯ ನಡಾವಳಿ ತಿದ್ದಪಡಿಮಾಡಿರುವ ಬಗ್ಗೆ ಪಿಡಿಒರನ್ನು ಅಮಾನತ್ತಿನಲ್ಲಿಟ್ಟು ಎಂಬಿಕೆ (ಮುಖ್ಯ ಪುಸ್ತಕ ಬರಹಗಾರರು) ನಿರ್ಮಲಅವನ್ನು ಕೆಲಸದಿಂದ ವಜಾಗೊಳಿಸಿ ತನಿಖೆ ನಡೆಸಬೇಕು ಎಂದು ಗ್ರಾಪಂ ಮಾಜಿ ಸದಸ್ಯ ವಿಶ್ವ ಜಿಪಂಸಿಇಒಗೆ ಮನವಿ ಮಾಡಿದರು.
ಬಾಳಗಡಿಯ ತಾಪಂ ಕಾರ್ಯಲಯದಲ್ಲಿ ಇಒಗೆ ಮನವಿ ಸಲ್ಲಿ ಸಿ ಮಾತನಾಡಿ, 2022ರಲ್ಲಿ
ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಮೇಶ್ ಹರಿಹರಪುರ ಗ್ರಾಪಂಗೆಕಾರ್ಯದರ್ಶಿಯಾಗಿ ಬಡ್ತಿ ಹೊಂದಿದ್ದರಿಂದ ಹಿರೇಕೊಡಿಗೆ ಗ್ರಾಪಂನಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿಆಪರೇಟರ್ ಹುದ್ದೆ ಖಾಲಿ ಇರುತ್ತದೆ. ಇತ್ತೀಚೆಗೆ ಖಾಲಿ ಹುದ್ದೆಗೆ ಕಾನೂನು ಬಾಹಿರವಾಗಿ ನಿರ್ಮಲಅವರನ್ನು ಶಿಫಾರಸ್ಸು ಮಾಡವ ಸಲುವಾಗಿ 2015ರ ಸಭಾ ನಡಾವಳಿಯನ್ನು ತಿದ್ದಿ ಲೋಪಎಸಗಿರುತ್ತಾರೆ. ಹಾಗೂ ಹಾಲಿ ಪಿಡಿಒ ಅವರು ಈ ಕಾನೂನು ಬಾಹಿರ ಚಟುವಟಿಕೆಯಲ್ಲಿಭಾಗಿಯಾಗಿದ್ದಾರೆ ಎಂದು ದೂರಿದರು.
ತಾಪಂ ಇಒ ನಿರ್ಮಲಾ ಅವರನ್ನು ಶಿಫಾರಸ್ಸು ಮಾಡಿ ಕಳುಹಿಸಿದ ಪತ್ರವು ಜಿಪಂ ಇಒ ಅನುಮೋದನೆನೀಡದೆ ಕೊಪ್ಪ ಇಒಗೆ ಪಾಪಸ್ ಕಳುಹಿಸಿರುತ್ತಾರೆ. ಅದನ್ನು ಪ್ರಶ್ನಿಸಿ ಇಒ ಕಾರಣ ಕೇಳಿ ಹಿರೇಕೊಡಿಗೆಪಿಡಿಒಗೆ ನೋಟಿಸ್ ನೀಡಿ, ನೀವು ನೀಡಿರುವ ಪ್ರಸ್ತಾವನೆ ಕಾನೂನು ರೀತಿಯಲ್ಲಿ ಸರಿಯಿದೆ ಎಂದುಕೇಳಿದಾಗ ಪಿಡಿಒ ನಿರ್ಮಲ ಅವರನ್ನು ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಆಯ್ಕೆಮಾಡಬಹುದು ಎಂದು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಪಿಡಿಒ, ನಿರ್ಮಲ ನೇರವಾಗಿ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಕಂಡು ಬರುತ್ತದೆ ಎಂದು ತಿಳಿಸಿದ್ದಾರೆ.
ಕಾನೂನು ಬಾಹಿರವಾಗಿ ಸಾಮಾನ್ಯ ಸಭೆ ನಡಾವಳಿಯನ್ನು ತಿದ್ದುಪಡಿ ಮಾಡಿರುವುದು ಹಾಗೂ
ಹಾಜರಾತಿ ಪುಸ್ತಕದಲ್ಲಿ ಕಾನೂನು ಬಾಹಿರವಾಗಿ ಸಹಿ ಮಾಡಿರುವುದು ಅಪರಾಧವಾಗಿರುತ್ತದೆ.
ಆದ್ದರಿಂದ ಪಿಡಿಒ ಅವರನ್ನು ಅಮಾನತಿನಲ್ಲಿಟ್ಟು ಎಂಬಿಕೆ ನಿರ್ಮಲ ಅವರನ್ನು ಕೆಲಸದಿಂದ
ವಜಾಗೊಳಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.