ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ತೋರಣದಿನ್ನಿ ಗ್ರಾಮ ಪಂಚಾಯತಿಯಲ್ಲಿ ಕಾಮಗಾರಿಗಳ ಕ್ರಿಯಾ ಯೋಜನೆ ಹಾಗೂ ಬಿಲ್ ಪಾಸ್ ಮಾಡಲು ಅಧ್ಯಕ್ಷರು ಮತ್ತು ಪಿಡಿಓ ಸದಸ್ಯರನ್ನು ಪರಿಗಣಿಸುತ್ತಿಲ್ಲ ಎಂದು ಪಂಚಾಯತಿ ಸದಸ್ಯ ಜೋಸೆ-ï ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗೋಗಿ ಹೆಬ್ಬಾಳ, ಮಲ್ಕಾಪುರ, ಹಾಗೂ ತೋರಣದಿನ್ನಿ ಗ್ರಾಮಗಳು ಬರುತ್ತವೆ. ಗ್ರಾಮ ಪಂಚಾಯತಿಯಿAದ ರೂಪಿಸಲಾಗುವ ಕ್ರಿಯಾ ಯೋಜನೆಗಳು, ಕಾಮಗಾರಿ ಬಿಲ್‌ಗಳನ್ನು ಪಾಸ್ ಮಾಡುವುದು ಸೇರಿದಂತೆ ಪಂಚಾಯತಿ ಕಾರ್ಯಗಳಿಗೆ ಪಂಚಾಯತಿ ಅಧ್ಯಕ್ಷ ಈರಪ್ಪ ಹಾಗೂ ಪಿಡಿಒ ತಿಮ್ಮಪ್ಪ ಸೇರಿ ಕೆಲವು ಸದಸ್ಯರನ್ನು ಮಾತ್ರ ಪರಿಗಣಿಸುತ್ತಿದ್ದು, ಉಳಿದ ಸದಸ್ಯರು ಈ ಬಗ್ಗೆ ಕೇಳಿದರೇ ಮಹಿಳಾ ಸದಸ್ಯರನ್ನು ನಿಂಽಸುತ್ತಾರೆ ಎಂದು ತಿಳಿಸಿದರು.
ಈ ಬಗ್ಗೆ ಹಲವು ಬಾರಿ ಮಸ್ಕಿ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಽಕಾರಿ ಅಮರೇಶ ಯಾದವ್ ಅವರಿಗೆ ದೂರು ಸಲ್ಲಿಸಲಾಗಿದೆ ಆದರೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ವಿಚಾರವನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಽಕಾರಿಗಳು ಹಾಗೂ ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಿಗೂ ದೂರು ಸಲ್ಲಿಸಲಾಗಿದೆ ಎಂದು ಹೇಳಿದರು. ಕೂಡಲೇ ಪಂಚಾಯತಿ ಅಭಿವೃದ್ಧಿ ಅಽಕಾರಿ ಹಾಗೂ ಅಧ್ಯಕ್ಷರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಲ್ಲಮ್ಮ, ಬಸವಲಿಂಗಮ್ಮ, ಗಂಗಪ್ಪ, ಹನುಮಂತ, ಭೀಮಣ್ಣ ಇದ್ದರು.