ಚಳ್ಳಕೆರೆ: ಸರ್ಕಾರದ ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಗ್ರಾಪಂ ಹಂತದಲ್ಲೂ ಅವಕಾಶ ಇರುತ್ತದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಸಿ. ಶಶಿಧರ ಹೇಳಿದರು.
ತಾಲೂಕಿನ ತಳಕು ಗ್ರಾಪಂನಲ್ಲಿ ಗೃಹಲಕ್ಷ್ಮೀ ಯೋಜನೆಯ ಅರ್ಹ ಫಲಾನುಭವಿಗಳಿಗೆ ಗುರುವಾರ ಆದೇಶ ಪತ್ರಗಳನ್ನು ವಿತರಿಸಿ ಮಾತನಾಡಿದರು.
ಆಹಾರ ಇಲಾಖೆ ಸೇರಿ ಸರ್ಕಾರ ನಿಯೋಜಿತ ಇಲಾಖೆಗಳಿಂದ ಪಡಿತರ ಚೀಟಿ ಇರುವ ಮಹಿಳೆಯರಿಗೆ ನೋಂದಣಿ ಕೇಂದ್ರಗಳ ಬಗ್ಗೆ ಎಸ್‌ಎಂಎಸ್ ಮೂಲಕ ಮಾಹಿತಿ ಬರಲಿದೆ ಎಂದು ತಿಳಿಸಿದರು.
ಗ್ರಾಮ ಒನ್, ನಾಡಕಚೇರಿ ಮತ್ತು ಬಾಪೂಜಿ ಸೇವಾ ಕೇಂದ್ರಗಳಿಗೆ ಗೊತ್ತುಪಡಿಸಿದ ಫಲಾನುಭವಿಗಳು ದಾಖಲೆ ನೀಡಿ ಸೌಲಭ್ಯಕ್ಕೆ ಅರ್ಹತೆ ಪಡೆದುಕೊಳ್ಳಬಹುದು.
ಪಂಚಾಯಿತಿ ಹಂತದ ಬಾಪೂಜಿ ಸೇವಾ ಕೇಂದ್ರದಲ್ಲಿ ನೋಂದಣಿ ಕಾರ್ಯ ಆರಂಭವಾಗಿದೆ. ಪಂಚಾಯಿತಿ ವ್ಯಾಪ್ತಿಯ 14 ಹಳ್ಳಿಗಳ ಫಲಾನುಭವಿಗಳಿಗೆ ಎಸ್‌ಎಂಎಸ್ ಆಧಾರಿಸಿ ಸೇವಾ ಕಾರ್ಯ ನೀಡಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ಶಮೀನ್ ಖಾನಮ್, ಕೃಷ್ಣಮೂರ್ತಿ, ಲಕ್ಷ್ಮೀ, ಎಂ.ಮಂಜುನಾಥ ಇತರರಿದ್ದರು.
ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರಿಗೆ ಜವಾಬ್ದಾರಿ ಇರುತ್ತದೆ. ಸರ್ಕಾರದ 2 ಸಾವಿರ ರೂ. ಸಹಾಯಧನ ಕುಟುಂಬ ಮತ್ತು ಮಕ್ಕಳ ಪೋಷಣೆಗೆ ಅನುಕೂಲವಾಗಲಿದೆ. ಬಡ ಕುಟುಂಬಗಳಿಗೆ ವಾರ್ಷಿಕ 24 ಸಾವಿರ ರೂ. ಸಿಗುತ್ತಿರುವುದು ಮಹಿಳೆಯರ ಸಬಲೀಕರಣಕ್ಕೆ ನೆರವಾಗಲಿದೆ.ಪೂರ್ಣಿಮಾ, ಫಲಾನುಭವಿ