ವಿಜಯಪುರ: ವಿದ್ಯಾರ್ಥಿಗಳಿಗೆ ಪಿಸಿಬಿ ವಿನ್ಯಾಸ ಮತ್ತು ತಯಾರಿಕೆ ಉಪಯುಕ್ತವಾಗಿದ್ದು, ಇಲೆಕ್ಟ್ರಾನಿಕ್ಸ್ ಕೌಶಲದಲ್ಲಿ ಪ್ರಾಯೋಗಿಕ ಅನುಭವ ಒದಗಿಸುವ ಜತೆಗೆ ಕಸ್ಟಮ್ ವಿನ್ಯಾಸಗೊಳಿಸಿದ ಮೂಲ ಮಾದರಿಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ ಎಂದು ಪ್ರಾಚಾರ್ಯ ಡಾ. ಮಂಜುನಾಥ ಪಿ. ಹೇಳಿದರು.
ನಗರದ ಬಿಎಲ್ಡಿಇ ಸಂಸ್ಥೆಯ ಡಾ. ಫ.ಗು. ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದಲ್ಲಿ ಪಿಸಿಬಿ ಡಿಸೈನ್ ಆ್ಯಂಡ್ ಫ್ಯಾಬ್ರಿಕೇಷನ್ ಎಂಬ ವಿಷಯದ ಮೇಲೆ ಹಮ್ಮಿಕೊಂಡಿದ್ದ ಎರಡು ದಿನಗಳ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಾಗಾರವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಡಿದರು.
ಸಂಪನ್ಮೂಲ ವ್ಯಕ್ತಿ ಆರ್. ಲಾಜಿಕ್ ಟೆಕ್ನಾಲಜಿಯ ರಾಕೇಶ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂಪೂರ್ಣ ವಿಷಯ ಾನ ಅರಿಯಲು ಇಂತಹ ಕಾರ್ಯಾಗಾರಗಳು ಅವಶ್ಯಕ ಎಂದರು.ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥೆ ಡಾ. ಜಯಲಕ್ಷಿ$್ಮ ಗೋನಾಳ, ಕಾರ್ಯಾಗಾರ ಸಂಯೋಜಕ ಡಾ. ಉಮೇಶ ದೀತ, ಡಾ. ಎಸ್.ಕೆ. ಪಡಗಾನೂರ, ರವಿ ಹತ್ತಿ ಮತ್ತಿತರರಿದ್ದರು.
ವಿಜಯಪುರದ ಬಿಎಲ್ಡಿಇ ಸಂಸ್ಥೆಯ ಡಾ. ಫ.ಗು. ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಪಿಸಿಬಿ ಡಿಸೈನ್ ಆ್ಯಂಡ್ ಫ್ಯಾಬ್ರಿಕೇಷನ್ ಎಂಬ ವಿಷಯದ ಕಾರ್ಯಾಗಾರ ನಡೆಯಿತು. ಡಾ. ಮಂಜುನಾಥ. ಪಿ., ರಾಕೇಶ, ಡಾ. ಜಯಲಕ್ಷಿ$್ಮ ಗೋನಾಳ ಮತ್ತಿತರರಿದ್ದಾರೆ.