ಬೆಂಗಳೂರು: 5 ವರ್ಷಗಳ ನಂತರ ಬೆಂಗಳೂರಿಗೆ ಬಂದಿರುವ ವಿಶ್ವವಿಖ್ಯಾತ ಜಾದುಗಾರ ಪಿ.ಸಿ ಸರ್ಕಾರ್ ಮ್ಯಾಜಿಕ್ ಶೋ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿದೆ. ಇಂದ್ರಜಾಲ ಮತ್ತಷ್ಟು ವೈವಿಧ್ಯತೆ ಮತ್ತು ಆಧುನಿಕ ತಲೆಮಾರಿನ ಪ್ರೇಕ್ಷರನ್ನು ಸೆಳೆಯುವ ಹೊಸ ಅವತಾರದೊಂದಿಗೆ ಪ್ರಾರಂಭವಾಗಿದೆ. ಮೊಬೈಲ್, ಟಿವಿ, ಕಂಪ್ಯೂಟರ್‌ನಲ್ಲಿ ತಲ್ಲೀನರಾಗಿರುವ ಜನ ಸಾಮಾನ್ಯರಿಗೆ ಮ್ಯಾಜಿಕ್ ಶೋ ಮುದ ನೀಡುತ್ತಿದೆ. ಜೆ.ಸಿ.ರಸ್ತೆಯಲ್ಲಿರುವ ಟೌನ್ ಹಾಲ್ನಲ್ಲಿ ನ. 10, 16, 17 ಮತ್ತು 18ರಂದು ಪ್ರದರ್ಶನ ನೀಡಲಿದ್ದಾರೆ. ಪಿ.ಸಿ.ಸರ್ಕಾರ್ ಅಂದ್ರೆ ಮ್ಯಾಜಿಕ್, ಮ್ಯಾಜಿಕ್ ಅಂದ್ರೆ ಪಿ.ಸಿ.ಸರ್ಕಾರ್. ‘ನಿದ್ದೆ ಮಾಡುವಾಗಲೂ ನಾನು ಮ್ಯಾಜಿಕ್‌ನ್ನೆ ಉಸಿರಾಡುತ್ತೇನೆ; ಎಚ್ಚರವಾದಾಗ ನಾನು ಮ್ಯಾಜಿಕ್ ನಲ್ಲಿ ನಿರತರಾಗುತ್ತೇನೆ’ ಎಂಬ ಅವರ ಮೊದಲ ದಿನದ ಪ್ರದರ್ಶನಕ್ಕೆ ಪ್ರೇಕ್ಷಕರು ಕರತಾಡನದ ಸ್ವಾಗತ ಕೋರಿದ್ದಾರೆ. ಹೆಚ್ಚಿನ ವಿವರಗಳಿಗೆ ದೂ: 96064 34666 ಸಂಪರ್ಕಿಸಿ. ಬುಕ್ ಮೈ ಶೋ ಮೂಲಕ ಆನ್‌ಲೈನ್ ಬುಕಿಂಗ್ ಲಭ್ಯವಿದೆ.
ವಿಶ್ವದ ಮ್ಯಾಜಿಕ್ ಲೋಕಕ್ಕೆ ಪಿ.ಸಿ. ಸರ್ಕಾರ್ ಕೊಡುಗೆ ಅಪಾರ. ನಗರದಲ್ಲಿ ನಡೆಯುತ್ತಿರುವ ಮ್ಯಾಜಿಕ್ ಶೋ ಮತ್ತೊಂದು ಮೈಲುಗಲ್ಲು ಸೃಷ್ಟಿಸುವ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಮ್ಯಾಜಿಕ್ ಕ್ಷೇತ್ರದಲ್ಲಿ ಪಿ.ಸಿ.ಸರ್ಕಾರ್ ತೋರಿದ ಪ್ರದರ್ಶನ, ಅಂತಾರಾಷ್ಟ್ರೀಯ ಆಕರ್ಷಣೆಯ ಕಲೆಯಾಗಿ ಹೊರಹೊಮ್ಮುವಂತೆ ಮಾಡಿವೆ.ಭಾರತೀಯ ಮ್ಯಾಜಿಕ್‌ನ್ನು ವಿಶ್ವ ವೇದಿಕೆಗೆ ಕೊಂಡೊಯ್ಯುವಲ್ಲಿ ಪಿ.ಸಿ. ಸರ್ಕಾರ್ ಕಾರಣವಾಗಿದ್ದು, ಅವರ ಮಕ್ಕಳು ಕೂಡ ತಂದೆಯ ಹಾದಿಯಲ್ಲಿ ಮುಂದುವರೆದಿದ್ದಾರೆ. ಜಗತ್ತಿನಾದ್ಯಂತ ಅನೇಕ ಮಹತ್ವದ ಪ್ರಶಸ್ತಿಗಳು ಇವರಿಗೆ ಸಂದಿವೆ.