ಬೆಂಗಳೂರು: ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ (ಪಿಸಿಪಿಎನ್‌ಡಿಟಿ)1994 ಅನುಷ್ಟಾನ ಸಂಬಂಧ ಯಶಸ್ವಿಗೊಂಡ ಗುಪ್ತಕಾರ್ಯಾಚರಣೆ ಅಥವಾ ಮಾಹಿತಿ ನೀಡುವವರಿಗೆ ನೀಡಲಾಗುವ ಬಹುಮಾನ ಮತ್ತೊವನ್ನು 50 ಸಾವಿರದಿಂದ ಒಂದು ಲಕ್ಷ ರೂ.ಗೆ ಹೆಚ್ಚಿಸಿದೆ.
ಈ ಕುರಿತು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದು, ಪಿಸಿಪಿಎನ್‌ಡಿಟಿ ಕಾಯ್ದೆ ಪರಿಣಾಮ ಕಾರಿ ಅನುಷ್ಟಾನ ಸಂಬಂಧ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ಅಡಿ ನೀಡುವ 50 ಸಾವಿರ ಮೊತ್ತದ ಜೊತೆಗೆ ಆಯಾ ಜಿಲ್ಲೆಗಳಲ್ಲಿ ಸಂಗ್ರಹವಾಗಿರುವ ಪಿಸಿಪಿಎನ್‌ಡಿಟಿ ಶುಲ್ಕದಿಂದ 50 ಸಾವಿರ ಸೇರಿ ಒಂದು ಲಕ್ಷ ರೂ. ನೀಡಲು ಆದೇಶಿಸಿದ್ದಾರೆ.