ಚಿತ್ರದುರ್ಗ: ಏಳು ದಿನದೊಳಗೆ ವಿದ್ಯುತ್ ಬಾಕಿ ಪಾವತಿಸುವಂತೆ ತನ್ನ ವ್ಯಾಪ್ತಿ ಗ್ರಾಪಂಗಳಿಗೆ ಚಿತ್ರದುರ್ಗ ಬೆಸ್ಕಾಂ ಗ್ರಾಮೀಣ ಉಪ ವಿಭಾಗ ಗಡುವು ನೀಡಿದೆ. ಕುಡಿಯುವ ನೀರು ಮತ್ತು ಬೀದಿ ದೀಪಕ್ಕಾಗಿ ಪೂರೈಸಿವ ವಿದ್ಯುತ್ ಬಿಲ್ ಬಾಕಿ ಪಾವತಿಸುವಂತೆ ಗ್ರಾಪಂಗಳಿಗೆ ಪತ್ರ ಬರೆಯಲಾಗಿದೆ.
ಹಣ ಪಾವತಿಸದೇ ಇದ್ದಲ್ಲಿ ಕುಡಿಯುವ ನೀರು,ಬೀದಿ ದೀಪಗಳಿಗೆ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗುವುದು. ತಮ್ಮ ಉಪವಿಭಾ ಗ ವ್ಯಾಪ್ತಿ ಗ್ರಾಪಂಗಳಿಂದ ಕಳೆದ ಸೆಪ್ಟೆಂಬರ್ ಅಂತ್ಯಕ್ಕೆ 1047.75 ಲಕ್ಷ ರೂ.ಬಾಕಿ ಪಾವತಿಯಾಗಬೇಕಿದೆ ಎಂದು ಬೆಸ್ಕಾಂ ಎಇಇ ಕೆ.ಕಿರಣ್ ರೆಡ್ಡಿ ತಿಳಿಸಿದ್ದಾರೆ.
ಗ್ರಾಪಂ-ಬಾಕಿ ಮೊತ್ತ(ಲಕ್ಷ ರೂ.)
ದ್ಯಾಮವ್ವನಹಳ್ಳಿ-7.32
ಮುದ್ದಾಪುರ-12.67
ಎಂ.ಕೆ.ಹಟ್ಟಿ-4.70
ಆಲಘಟ್ಟ-49.83
ಅನ್ನೇಹಾಳ್-22.84
ಬೆಳಘಟ್ಟ-170.99
ಭರಮಸಾಗರ-61.70
ಭೀಮಸಮುದ್ರ-24.95
ಬ್ಯಾಲಾಳ್-1.37
ಚಿಕ್ಕಬೆನ್ನೂರು-39.09
ಚೋಳಘಟ್ಟ-14.69
ಗೋಡಬನಾಳ್-41.86
ಗೋನೂರು-8.69
ಹುಲ್ಲೂರು-91.35
ಇಸಾಮುದ್ರ-43.60
ಐನಹಳ್ಳಿ-17.71
ಜಾನುಕೊಂಡ-50.12
ಕಾಲ್ಗೆರೆ-27
ಕೋಗುಂಡೆ-32.92
ಕೊಳಹಾಳ್-36.99
ಕೂನಬೇವು-33.83
ಲಕ್ಷ್ಮೀಸಾಗರ-90.25
ಸಿದ್ದಾಪುರ-38.90
ಸಿರಿಗೆರೆ-21.06
ಸೊಂಡೆಕೊಳ-51.96
ತುರುವನೂರು-88.22
ಯಳಗೋಡು-32.23
ಹಿರೇಗುಂಟನೂರು-1.91.
-----