ಸುಳ್ಯ: ಗಾಂಧಿ ಜಯಂತಿ ಪ್ರಯುಕ್ತ ಸುಳ್ಯ ಕೇರ್ಪಳ ಪಯಸ್ವಿನಿ ಯುವಕ ಮಂಡಲದ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನ ಭಸ್ಮಡ್ಕ ಜಂಕ್ಷನ್‌ನಿಂದ ಕೆ.ವಿ.ಜಿ. ಕ್ಯಾಂಪಸ್ ರಸ್ತೆಯ ತನಕ ನಡೆಯಿತು.
ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಅಭಿಯಾನಕ್ಕೆ ಚಾಲನೆ ನೀಡಿದರು. ಯುವಕ ಮಂಡಲದ ಅಧ್ಯಕ್ಷ ಭರತ್ ಕುರುಂಜಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮಂಡಲ ಪ್ರಧಾನ ಕೆ.ಸಿ.ಸದಾನಂದ ಹಾಗೂ ಸುಳ್ಯ ಸಿ.ಎ.ಬ್ಯಾಂಕ್ ನಿರ್ದೇಶಕ ಶಿವರಾಮ ಕೇರ್ಪಳ ಶುಭಹಾರೈಸಿದರು.
ಸುಳ್ಯ ನಪಂ ಸದಸ್ಯರಾದ ಪೂಜಿತಾ ಕೆ.ಯು, ಸುಧಾಕರ ಕುರುಂಜಿಭಾಗ್, ಮಂಡಲದ ಸ್ಥಾಪಕಾಧ್ಯಕ್ಷ ಕೆ.ಸಿ.ಶಿವಾನಂದ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಅರೆಭಾಷೆ ಅಕಾಡೆಮಿ ಸದಸ್ಯ ಡಾ.ಎನ್.ಎ.ಜ್ಞಾನೇಶ್, ಮೇದಪ್ಪ ಗೌಡ ನೆಕ್ರಾಜೆ, ವಸಂತ ಕುರುಂಜಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವಿಶ್ವನಾಥ ನೆಲ್ಲಿಬಂಗಾರಡ್ಕ, ಉಪನ್ಯಾಸಕ ಶ್ರೀಧರ, ಗಂಗಾಧರ್ ಕುರುಂಜಿ, ಪುರುಷೋತ್ತಮ ಭಸ್ಮಡ್ಕ, ನಗರ ಗೌಡ ಸಂಘದ ಕಾರ್ಯದರ್ಶಿ ರಾಧಾಕೃಷ್ಣ ಕುಂತಿನಡ್ಕ, ಯುವಕ ಮಂಡಲದ ಕಾರ್ಯದರ್ಶಿ ಹೇಮಪ್ರಕಾಶ ಕುಂತಿನಡ್ಕ ಮೊದಲಾದವರು ಭಾಗವಹಿಸಿದ್ದರು. ವಿನ್ಯಾಸ ಕುರುಂಜಿ ಸ್ವಾಗತಿಸಿದರು. ಲಕ್ಷ್ಮೀಶ್ ದೇವರಕಳಿಯ ವಂದಿಸಿದರು. ಚಂದ್ರಶೇಖರ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.