ದೇವದುರ್ಗ: ಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕರು ಸ್ಥಳೀಯ ಆಡಳಿತಕ್ಕೆ ತೆರಿಗೆ ಪಾವತಿ ಮಾಡಬೇಕು ಎಂದು ತಾಪಂ ಇಒ ಬಸವರಾಜ ಹಟ್ಟಿ ಹೇಳಿದರು.
ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ತಾಲೂಕು ಆಡಳಿತ ಹಾಗೂ ಗ್ರಾಪಂಯಿಂದ ಆಯೋಜಿಸಿದ್ದ ವಿಶೇಷ ತೆರಿಗೆ ಅಭಿಯಾನ ಹಾಗೂ ತೆರಿಗೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.
ಪ್ರತಿಯೊಬ್ಬ ನಾಗರಿಕ ನೀರು, ಮನೆ, ಮಳಿಗೆ, ಖಾಲಿ ನಿವೇಶನ ತೆರಿಗೆ ಸಮಯಕ್ಕೆ ಸರಿಯಾಗಿ ಪಾವತಿ ಮಾಡಬೇಕು. ತಾಲೂಕಿನ 33ಗ್ರಾಪಂ ವ್ಯಾಪ್ತಿಯಲ್ಲಿ ವಿಶೇಷ ತೆರಿಗೆ ಪಾವತಿ ಹಾಗೂ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಜನರು ಸಹಕಾರ ನೀಡಿ ಅಭಿಯಾನ ಯಶಸ್ವಿಗೊಳಿಸಬೇಕು ಎಂದರು. ತಾಪಂ ಎಡಿ ಅಣ್ಣರಾವ್, ಪಿಡಿಒ ಮಲ್ಲಿಕಾರ್ಜುನ, ತಾಯಣ್ಣ, ಬಸವರಾಜ, ನಿಂಗಪ್ಪ, ಶಿವರಾಜ, ಹನುಮಂತ ಇತರರಿದ್ದರು.