ಜಮಖಂಡಿ ನಗರದ ಅಂಬೇಡ್ಕರ್ ಭವನದಲ್ಲಿ ನಗರ ಸಭೆ ಆಶ್ರಯದಲ್ಲಿ ಆಯೋಜಿಸಿದ್ದ ಇ ಖಾತಾ ಅಭಿಯಾನದಲ್ಲಿ ಪೌರಾಯುಕ್ತ ಜ್ಯೋತಿ ಗಿರೀಶ ಆಸ್ತಿ ಮಾಲಿಕರಿಂದ ಅರ್ಜಿ ಪರಿಶೀಲಿಸಿದರು. ಕಂದಾಯ ಅಧಿಕಾರಿ ಯಲ್ಲಪ್ಪ ಬಿದರಿ, ಕುಸುಮಾ ಸೊಪ್ಪಡ್ಲ, ಸೋಮು ದೇವರಮನಿ ಇದ್ದರು. 
ಜಿಲ್ಲೆ

ಆನ್‌ಲೈನ್‌ನಲ್ಲೆ ಆಸ್ತಿ ತೆರಿಗೆ ತುಂಬಿ

ದತ್ತಾತ್ರೇಯ ಪಿ ಕುಲಕರ್ಣಿ

ಜಮಖಂಡಿ: ಇ-ಖಾತಾ ಮಾಡಿಸಿಕೊಳ್ಳುವುದರಿಂದ ಆಸ್ತಿ ಮಾಲಿಕರಿಗೆ ಬಹಳಷ್ಟು ಉಪಯೋಗವಾಲಿದೆ ಎಂದು ಪೌರಾಯುಕ್ತ ಜ್ಯೋತಿ ಗಿರೀಶ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ನಗರ ಸಭೆಯಿಂದ ಭಾನುವಾರ ಇ ಖಾತಾ ಅಭಿಯಾನ ನಡೆಸಿ ಅವರು ಮಾತನಾಡಿದರು.

ಇ-ಖಾತಾ ಮಾಡಿಸಿಕೊಳ್ಳುವದರಿಂದ ಆಸ್ತಿ ಮಾಲಿಕರು ಬರುವ ದಿನಗಳಲ್ಲಿ ಆನ್‌ಲೈನ್‌ನಲ್ಲೆ ಆಸ್ತಿ ತೆರಿಗೆ ತುಂಬಬಹುದು, ಉಪನೋಂದಣಿ ಕಚೇರಿಗೆ ಲಿಂಕ್ ಆಗುವುದರಿಂದ ಆಸ್ತಿ ಮಾರಾಟ ಮಾಡಲು, ಕೊಂಡುಕೊಳ್ಳಲು ಸಹಕಾರಿಯಾಗಲಿದೆ. ಮಧ್ಯವರ್ತಿಗಳ ಸಂಪರ್ಕ ಇಲ್ಲದೆ ಅಸ್ತಿಗೆ ಸಂಬಂಧಿಸಿದ ಸರ್ಕಾರಿ ಸೌಲಭ್ಯ ಪಡೆಯಲು, ಕಟ್ಟಡ ಪರವಾನಿಗೆ, ಸಾಲ ಪಡೆದುಕೊಳ್ಳಲು ಇ ಖಾತೆ ಕಡ್ಡಾವಾಗಿದೆ ಈ ನಿಟ್ಟಿನಲ್ಲಿ ಅಭಿಯಾನದ ಸೌಲಭ್ಯವನ್ನು ಆಸ್ತಿ ಮಾಲಿಕರು ಪಡೆದುಕೊಳ್ಳಬೇಕು ಎಂದರು.

125 ಅರ್ಜಿಗಳು ಸ್ವಿಕೃತಗೊಂಡಿದ್ದು, ಅದರಲ್ಲಿ 80ಕ್ಕೂ ಅಧಿಕ ಅರ್ಜಿಗಳಿಗೆ ಈ ಖಾತಾ ಉತಾರ ನೀಡಿದರು. ಕಂದಾಯ ಅಧಿಕಾರಿ ಯಲ್ಲಪ್ಪ ಬಿದರಿ, ಕುಸುಮಾ ಸೊಪ್ಪಡ್ಲ, ಸೋಮು ದೇವರಮನಿ, ಅಮೀತ ಕೋಳಕರ, ಐ.ಎಂ. ಬೋಜಗಾರ, ಅನೀಲ ಜಿರಗಾಳ, ಐ.ಐ. ಕುಳ್ಳಳಿ, ಶ್ರೀಶೈಲ ಹವಾರಿ ಇದ್ದರು.