ಜಿಲ್ಲೆ

ಓದಿನತ್ತ ಹೆಚ್ಚಿನ ಗಮನ ನೀಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಕುಸುಮನಗರ ಬಳಿಯ ಸಿ.ವಿ.ರಾಮನ್​ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ ಹಾಗೂ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಜಗತ್ತಿನಲ್ಲಿ ಸಾಧನೆಯ ಬಲದಿಂದ ಏನು ಬೇಕಾದರೂ ಗೆಲ್ಲಬಹುದು. ಸ್ವರ್ಧಾತ್ಮಕ ಜಗತ್ತಿನಲ್ಲಿ ಎಷ್ಟೇ ಓದಿದರೂ ಕಡಿಮೆ. ಹೀಗಾಗಿ ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡದೆ ಓದಿನತ್ತ ಹೆಚ್ಚಿನ ಗಮನ ನೀಡಬೇಕು ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಕಾಲೇಜು ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಸಂಸ್ಥೆ ಇನ್ನು ಎತ್ತರಕ್ಕೆ ಬೆಳೆದು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.
ಸಂಸ್ಥೆ ಅಧ್ಯಕ್ಷ ಡಾ. ವಿಜಯ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕರಾದ ಗಿರೀಶ ಹಾದಿಮನಿ, ದುಂಡಯ್ಯ ಹಿರೇಮಠ, ಪ್ರಾಚಾರ್ಯೆ ಅನುರಾಧಾ ಆರಾಧ್ಯಮಠ, ಬಸವರಾಜ ಹಂಪಣ್ಣವರ, ಬಸವರಾಜ ಪಾಟೀಲ, ಸುಧಾ, ಪೂಜಾ, ಶಿಕ್ಷಕರು, ಇತರರು ಇದ್ದರು.
ಮಾರುತಿ ಕದಂ ನಿರೂಪಿಸಿದರು. ಬಸವರಾಜ ವಂದಿಸಿದರು.