ಕೇಂದ್ರ ಸರ್ಕಾರ ಕೂಡಲೇ ರಾಜ್ಯದ ಜಿಎಸ್‌ಟಿ ಬಾಕಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ದೀಪಕ್, ಪ್ರಭು, ಮಂಜುನಾಥ್, ಕೇಶವಮೂರ್ತಿ, ಬಿ.ಜಿ.ಕುಂಬಾರ್, ವಿ.ಆರ್.ಮರಾಠೆ ಮುಂತಾದವರು ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಕರ್ನಾಟಕದ ಜಿಎಸ್‌ಟಿ ಬಾಕಿ ನೀಡಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾ ಎಲ್ಲ ರಾಜ್ಯಗಳನ್ನೂ ಸಮನಾಗಿ ಕಾಣಬೇಕು. ಅಲ್ಲಿಂದ ಸಂಗ್ರಹವಾಗುವ ತರಿಗೆಯ ಹಂಚಿಕೆಯಲ್ಲೂ ತಾರತಮ್ಯ ತೋರಬಾರದು. ಕರ್ನಾಟಕದ ಜಿಎಸ್‌ಟಿ ಬಾಕಿ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಬರಪರಿಸ್ಥಿತಿಯಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಇವರಿಗೆ ಸರ್ಕಾರ ಅಗತ್ಯ ನೆರವು ನೀಡಲು ಕೇಂದ್ರ ಕೈ ಜೋಡಿಸಬೇಕು. ವಾಸ್ತವದಲ್ಲಿ ಕೇಂದ್ರ ಸರ್ಕಾರ ಬರ ಪರಿಹಾರಕ್ಕೆಂದು ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಕಡೇ ಪಕ್ಷ ರಾಜ್ಯದ ತೆರಿಗೆ ಸಂಗ್ರಹ ಬಾಕಿಯನ್ನಾದರೂ ಕೂಡಲೇ ನೀಡಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಮುಖರಾದ ಪ್ರಭು, ದೀಪಕ್, ಮಂಜುನಾಥ್, ವಿ.ಆರ್.ಮರಾಠೆ, ಕೇಶಮೂರ್ತಿ, ಬಿ.ಜಿ.ಕುಂಬಾರ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು