ದೇವರ ಹಿಪ್ಪರಗಿ ತಾಲೂಕಿನ ಕಡ್ಲೇವಾಡ ಗ್ರಾಮದಲ್ಲಿ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ವಾಲ್ಮೀಕಿ ಜಯಂತ್ಯುತ್ಸವವನ್ನು ಗಣ್ಯರು ಉದ್ಘಾಟಿಸಿದರು. ಪ್ರಸನ್ನಾನಂದ ಪುರಿ ಸ್ವಾಮೀಜಿ, ಮಲ್ಲಿಕಾರ್ಜುನ ಬಟಗಿ, ರಾಜುಗೌಡ ನಾಯಕ ಮತ್ತಿತರರಿದ್ದಾರೆ. 
ಜಿಲ್ಲೆ

ಶೈಕ್ಷಣಿಕ ಅಭಿವೃದ್ಧಿಗೆ ಗಮನಕೊಡಿ

ದತ್ತಾತ್ರೇಯ ಪಿ ಕುಲಕರ್ಣಿ

ವಿಜಯಪುರ: ವಾಲ್ಮೀಕಿ ಸಮಾಜವು ಶಿಕ್ಷಣ ವಂಚಿತವಾಗಿದ್ದು, ಮುಂಬರುವ ದಿನಮಾನಗಳಲ್ಲಿ ಸಮಾಜದ ಪ್ರತಿಯೊಬ್ಬರು ಕೂಡ ಶಿಕ್ಷಣ ಪಡೆಯುವಂತಾಗಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.

ದೇವರ ಹಿಪ್ಪರಗಿ ತಾಲೂಕಿನ ಕಡ್ಲೇವಾಡ ಗ್ರಾಮದಲ್ಲಿ ಬುಧವಾರ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ವಾಲ್ಮೀಕಿ ಜಯಂತ್ಯುತ್ಸವದ ದಿವ್ಯ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.

ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 2 ಲಕ್ಷ ನಕಲಿ ಜಾತಿ ಪ್ರಮಾಣ ಪತ್ರ ವಿತರಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರ ಗಮನ ಸೆಳೆದರು ಪ್ರಯೋಜನವಾಗಿಲ್ಲ, ಮುಖ್ಯಮಂತ್ರಿಗಳು ಕೂಡಲೇ ಸಂಪುಟ ಸಭೆ ಕರೆದು ವಾಲ್ಮೀಕಿ ಸಮಾಜಕ್ಕೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಆಗ್ರಹಿಸಿದರು.

ಮಾಜಿ ಸಚಿವ ರಾಜುಗೌಡ ನಾಯಕ ಮಾತನಾಡಿದರು. ಅಡವಿಲಿಂಗ ಮಹಾರಾಜರು, ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಮಲ್ಲಿಬೊಮ್ಮಯ್ಯ ಸ್ವಾಮೀಜಿ, ಶಿವಪ್ಪ ಪೂಜಾರಿ ಮತ್ತು ಕರಿಸಿದ್ಧೇಶ್ವರ ಪಟ್ಟದ ದೇವರು ಸಾನ್ನಿಧ್ಯ ವಹಿಸಿದ್ದರು. ವಾಲ್ಮೀಕಿ ಮೂರ್ತಿ ಪ್ರತಿಷ್ಟಾಪನೆ ಹಿನ್ನೆಲೆ 251 ಮಹಿಳೆಯರಿಂದ ಕುಂಭ ಮೇಳವು ನಡೆಯಿತು.

ನಾಗರಾಜ ಒಕ್ಕಲದಿನ್ನಿ, ಸಂಜೀವ ಕುಮಾರ ನಾಯ್ಕೋಡಿ, ಧರ್ಮದರ್ಶಿ ಮಲ್ಲಪ್ಪ ಕವಲಗಿ, ಶರಣಗೌಡ ಪಾಟೀಲ, ವಿಠಲ ದೇಗಿನಾಳ, ರವಿ ಬಿಸನಾಳ, ಚಂದ್ರಶೇಖರ ಗಣಜಲಿ, ವಿಠಲ ಸಾಹುಕಾರ ಕನ್ನೊಳ್ಳಿ, ವೆಂಕಣ್ಣ ಗಣಜಲಿ, ನಿಂಗಪ್ಪ ನಾಟೀಕಾರ, ನಾಗಪ್ಪ ನಾಟೀಕಾರ, ಅರ್ಜುಣ ನಾಯ್ಕೋಡಿ, ಮಂಜುನಾಥ ನಾಯ್ಕೋಡಿ, ಸದಾಶಿವ ಕಡ್ಲೇವಾಡ, ಸಿದ್ಧಲಿಂಗ ಕಡ್ಲೇವಾಡ, ಗ್ರಾಮಸ್ಥರು ಮತ್ತಿತರರಿದ್ದರು.