ರಾಯಚೂರು: ವಿವಿಧ ಇಲಾಖೆಯ ವ್ಯಾಪ್ತಿಗೆ ಬರುವ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ವೇತನ ಪರಿಷ್ಕರಣೆಯನ್ನು ಜಾರಿಗೊಳಿಸಬೇಕು. ಕಾರ್ಮಿಕರಿಗೆ ಶಾಸನಬದ್ಧ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಮಾನ್ವಿ ತಾಲೂಕಿನ ಮೆಟ್ರಿಕ್ ಪೂರ್ವ ವಸತಿನಿಲಯ ಕಾರ್ಮಿಕರಿಗೆ ಕಳೆದ 5 ತಿಂಗಳಿಂದ, ಮೆಟ್ರಿಕ್ ನಂತರದ ಹಾಸ್ಟೆಲ್ ಕಾರ್ಮಿಕರಿಗೆ 6 ತಿಂಗಳಿಂದ ವೇತನ ಪಾವತಿಯಾಗಿಲ್ಲ. ಲಿಂಗಸುಗೂರಿನ ಮೆಟ್ರಿಕ್ ಪೂರ್ವ ವಸತಿ ನಿಲಯ ಕಾರ್ಮಿಕರಿಗೆ 7 ತಿಂಗಳಿಂದ, ಬಿಸಿಎಂ ವಸತಿ ನಿಲಯದ ಕಾರ್ಮಿಕರಿಗೆ 3 ತಿಂಗಳಿಂದ ವೇತನ ಪಾವತಿ ಬಾಕಿಯಿದೆ.
ಕಾರ್ಮಿಕರಿಗೆ ವೇತನ ಚೀಟಿ, ರಜೆ ಸೌಲಭ್ಯ, ಗುರುತಿನ ಚೀಟಿ, ಪಿಎ್ ಮತ್ತು ಇಎಸ್‌ಐ ನೀಡಬೇಕು. ವಾರದೊಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ಕೆಲಸ ಸ್ಥಗಿತಗೊಳಿಸಿ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಹೇಶ ಚೀಕಲಪರ್ವಿ, ಪದಾಕಾರಿಗಳಾದ ಅಣ್ಣಪ್ಪ ಶಿರಶ್ಯಾಡ್, ಹುಲಿಗೆಪ್ಪ, ಹುಚ್ಚಣ್ಣ, ಶಶಿಕುಮಾರ, ಬಸವರಾಜ, ಮುಸ್ತಾ, ಮಹೇಶ, ಈರಮ್ಮ, ಗಾಯತ್ರಿ ಪಾಲ್ಗೊಂಡಿದ್ದರು.