ಧಾರವಾಡ: ಶಿಕ್ಷಣ ಇಲಾಖೆ ಆಯೋಜಿಸಿದ್ದ 2025- 26ನೇ ಸಾಲಿನ ದಸರಾ ಹಬ್ಬದ ಕ್ರೀಡಾ ಸ್ಪರ್ಧೆಯಲ್ಲಿ ನಗರದ ಪವನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.
ತಾಲೂಕು ಮಟ್ಟದ 17 ವರ್ಷದೊಳಗಿನ ಥ್ರೋಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು 12 ಬಂಗಾರದ ಪದಕ, ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು 12 ಬೆಳ್ಳಿ ಪದಕದ ಜತೆ ಟ್ರೋಫಿ ಗಳಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶಿವಾನಿ ಗಾಯಕವಾಡ, ಮಾಹೀನ ಅಬ್ಬಿಗೇರಿ, ಅನ್ವೇಷಾ ಕಲಾದಗಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಪವನ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ರತ್ನಾ ಪಾಟೀಲ, ಪ್ರಾಚಾರ್ಯ ವಿಕ್ರಂ ಮಹಾಶಬ್ದೆ, ಶಾಲಾ ಮುಖ್ಯ ಸಂಯೋಜಕಿ ಸವಿತಾ ಕಂಬಿ, ದೈಹಿಕ ಶಿಕ್ಷಣ ಶಿಕ್ಷಕ ನವೀನ ಜಗತಾಪ ಅಭಿನಂದಿಸಿದರು.