ಮಾನ್ವಿ: ವೀರಭದ್ರೇಶ್ವರ ಹಾಗೂ ಪಾವಡಿ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಜಾತ್ರೆ ಅಂಗವಾಗಿ ಭಕ್ತರು ಅಗ್ನಿಕುಂಡಕ್ಕೆ ತುಳಿದರು.
ಜಾತ್ರೆ ಅಂಗವಾಗಿ ಬೆಳಗ್ಗೆಯಿಂದ ರುದ್ರಭಿಷೇಕ, ಕುಂಭಾಭಿಷೇಕ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಸ್ಥಾನದಿಂದ ಕುಂಬರ ಓಣಿ ಹತ್ತಿರದ ಹಿರೇಬಾವಿಗೆ ತೆರಳಿ ಗಂಗೆ ಪೂಜೆ ನೆರವೇರಿಸಿ.
ನಂತರ ಸುಮಂಗಳಿಯರು ಕುಂಭ, ಕಳಸದೊಂದಿಗೆ ಪ್ರಮುಖ ಬೀದಿಗಳಲ್ಲಿ ಪುರವಂತರಿಂದ ವೀರಭದ್ರೇಶ್ವರ ಸ್ವಾಮಿ ಒಡಪುಗಳನ್ನು ಹೇಳುತ್ತ ಪಲ್ಲಕ್ಕಿ ಮೆರವಣಿಗೆ ಜರುಗಿತು. ಸಂಜೆ 6ಕ್ಕೆ ವೀರಭದ್ರೇಶ್ವರ ಪಾವಡಿ ಬಸವೇಶ್ವರ ರಥೋತ್ಸವ ನಂತರ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ನಡೆಯಿತು.