ಜಿಲ್ಲೆ

ವಾರಕ್ಕೊಂದು ದಿನ ಪೌತಿಖಾತೆ ಆಂದೋಲನ: ತಹಸೀಲ್ದಾರ್ ಡಾ.ಶಿವಕುಮಾರ ಬಿರಾದರ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ತಾಲೂಕಿನ ಹನಕೆರೆ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಕಂದಾಯ ಇಲಾಖೆ ವತಿಯಿಂದ ಶುಕ್ರವಾರ ಪೌತಿ ಖಾತೆ ಆಂದೋಲನಕ್ಕೆ ತಹಸೀಲ್ದಾರ್ ಡಾ.ಶಿವಕುಮಾರ ಬಿರಾದರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಕುಟುಂಬದ ಮುಖ್ಯಸ್ಥರು, ಸದಸ್ಯರು ಮರಣ ಹೊಂದಿದ ಬಳಿಕ ಆರ್‌ಟಿಸಿ ಬದಲಾವಣೆಯಾಗದೆ ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅದನ್ನು ಸರಿಪಡಿಸಲು ವಾರಕ್ಕೊಂದು ದಿನ ಗ್ರಾಪಂಗಳಿಗೆ ತೆರಳಿ ಪೌತಿಖಾತಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷ ಮನೋಜ್‌ಕುಮಾರ್, ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಮೋಹನ್, ಮಂಜೇಶ್, ರಾಮಕೃಷ್ಣ, ರವಿ, ಜಯರಾಂ, ನಾಡಕಚೇರಿ ಉಪ ತಹಸೀಲ್ದಾರ್ ರೋಹಿತ್‌ಕುಮಾರ್ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಇದೇ ವೇಳೆ ಪೌತಿ ಖಾತೆ ಸೇರಿದಂತೆ ವಿವಿಧ ಕೆಲಸಕ್ಕೆ 50 ಅರ್ಜಿ ಸ್ವೀಕರಿಸಲಾಯಿತು. ಅಂತೆಯೇ ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ಪತ್ರ ನೀಡಲಾಯಿತು.