ಬೆಳಗಾವಿಯ ಖಾಸಬಾಗ್ ಬಳಿ ಇರುವ ಪ್ಯಾಟ್ಸನ್ ಹೋಂಡಾ ಶೋ ರೂಂನಲ್ಲಿ ಆರ್‌ಟಿಒ ಶಿವಾನಂದ ಮಗದುಮ್ಮ ಬಿಎಸ್-6 ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಪ್ಯಾಟ್ಸನ್ ಹೋಂಡಾದ ಸಂಚಾಲಕ ರಾಹುಲ್ ಪಾಟೀಲ, ವ್ಯವಸ್ಥಾಪಕ ಅಭಿಷೇಕ ಮಠಪತಿ ಇತರರು ಇದ್ದರು. 
ಜಿಲ್ಲೆ

ಪ್ಯಾಟ್ಸನ್ ಹೋಂಡಾ ವಾರ್ಷಿಕೋತ್ಸವ ಕಾರ್ಯಕ್ರಮ

Belagavi

ಬೆಳಗಾವಿ: ಆಟೋಮೊಬೈಲ್ ಕ್ಷೇತ್ರದಲ್ಲಿ 1965ರಿಂದ ಸಕ್ರಿಯವಾಗಿರುವ ಪ್ಯಾಟ್ಸನ್ ಹೋಂಡಾ ಶೋರೂಂನಲ್ಲಿ ಇತ್ತೀಚೆಗೆ ‘ಹೋಂಡಾ ವಾಹನಗಳ ಮಾರಾಟ’ ಪ್ರಕ್ರಿಯೆಯ ಮೊದಲ ವಾರ್ಷಿಕೋತ್ಸವ ಆಚರಿಸಲಾಯಿತು. ಇದೇ ವೇಳೆ ಹೋಂಡಾ ಕಂಪನಿಯು ಬಿಎಸ್-6 ಮಾದರಿ ವಾಹಗಳನ್ನು ಮಾರಾಟ ಮಾಡಲು ಆರಂಭಿಸಲಾಯಿತು.

ಬೆಳಗಾವಿಯ ಆರ್‌ಟಿಒ ಶಿವಾನಂದ ಮಗದುಮ್ಮ ಅವರು ಬಿಎಸ್-6 ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಪ್ಯಾಟ್ಸನ್ ಹೋಂಡಾದ ಸಂಚಾಲಕ ರಾಹುಲ್ ಪಾಟೀಲ ಹಾಗೂ ವ್ಯವಸ್ಥಾಪಕ ಅಭಿಷೇಕ ಮಠಪತಿ ನೂತನ ವಾಹನದ ಕೀಗಳನ್ನು ಗ್ರಾಹಕರಿಗೆ ವಿತರಿಸಿದರು. ಇದೇ ವೇಳೆ ಸುಸಜ್ಜಿತ ಆಟೋಮೇಟೆಡ್ ವರ್ಕ್‌ಶಾಪ್ ಆರಂಭಿಸಲಾಯಿತು.

ಬಿಎಸ್-6 ವಾಹನಗಳು ವಾಯುಮಾಲಿನ್ಯ ನಿಯಂಣತ್ರಣ ಸೇರಿ ಇನ್ನಿತರ ನೂತನ ಸೌಲಭ್ಯ ಹೊಂದಿದ್ದು, ಕಡಿಮೆ ಖರ್ಚಿನಲ್ಲಿ ವಾಹನ ನಿರ್ವಹಣೆ ಮಾಡಬಹುದು. ಪ್ಯಾಟ್ಸನ್ ಹೋಂಡಾ ಶೋ ರೂಂನಲ್ಲಿ ಭಾನುವಾರ ಸಹ ಗ್ರಾಹಕರಿಗೆ ಸೇವೆ ಒದಗಿಸಲಾಗುತ್ತಿದ್ದು, ಸ್ಥಳೀಯರು ಸದುಪಯೋಗ ಮಾಡಿಕೊಳ್ಳಬೇಕು ಎಂದು ರಾಹುಲ್ ಪಾಟೀಲ ಮನವಿ ಮಾಡಿದರು.