ಜಿಲ್ಲೆ

ತಳ ಸಮುದಾಯಗಳ ಆಶ್ರಯದಾತ ಅರಸು

ವಸಂತಕುಮಾರ್ ಬಿ

ಹನಗೋಡು: ಭೂ ಮಾಲೀಕರ ದಬ್ಬಾಳಿಕೆಯಿಂದ ನಲುಗಿದ್ದ ಕೂಲಿ ಕಾರ್ಮಿಕರು, ದೀನ ದಲಿತರಿಗೆ ಭೂಮಿ ಕೊಟ್ಟು ತಳ ಸಮುದಾಯಗಳಿಗೆ ಡಿ.ದೇವರಾಜ ಅರಸು ಆಶ್ರಯದಾತರಾಗಿದ್ದರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಬಣ್ಣಿಸಿದರು.

ಹನಗೋಡು ಹೋಬಳಿಯ ಅರಸು ಕಲ್ಲಹಳ್ಳಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಸಮಾಧಿಗೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಹಾಗೂ ತುಮಕೂರಿನ ತಮ್ಮ ಅಪಾರ ಬೆಂಬಲಿಗರೊಂದಿಗೆ ಸೋಮವಾರ ಭೇಟಿ ನೀಡಿ ಮಾತನಾಡಿದರು.

ಮೇ 21ರಂದು ತಮ್ಮ 75ನೇ ವರ್ಷದ ಹುಟ್ಟುಹಬ್ಬದ ಅಮೃತ ಮಹೋತ್ಸವವನ್ನು ತಮ್ಮ ಅಭಿಮಾನಿಗಳು, ತುಮಕೂರಿನ 29 ವಿವಿಧ ಸಮುದಾಯ ಸಂಘಟನೆಗಳ ಒಕ್ಕೂಟ ಹಾಗೂ ಕಾರ್ಯಕರ್ತರು ತುಮಕೂರಿನಲ್ಲಿ ಆಚರಿಸುತ್ತಿದ್ದು, ನನ್ನ ಯಾವುದೇ ರಾಜಕೀಯ ಹಾಗೂ ಶುಭ ಕಾರ್ಯಗಳು ನಡೆಯುವ ಮುನ್ನ ದೇವರಾಜ ಅರಸರ ಸಮಾಧಿಗೆ ಬಂದು ಪೂಜೆ ಸಲ್ಲಿಸುವ ಸಂಪ್ರದಾಯವಿಟ್ಟು ಕೊಂಡಿದ್ದೇನೆ ಎಂದರು.

ನಾನು ಹಿಂದುಳಿದ ವರ್ಗಗಳ ನೇತಾರ ಡಿ.ದೇವರಾಜ ಅರಸರ ಅನುಯಾಯಿಯಾಗಿದ್ದು, ಅವರ ತತ್ವ ಸಿದ್ಧಾಂತಗಳಿಂದ ಪ್ರೇರಿತನಾಗಿದ್ದೇನೆ. ಗಳ ಪ್ರೇರಕನಾಗಿ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ರಾಜಕೀಯವಾಗಿ ನಡೆಯುತ್ತಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಎಚ್ ಪಿ ಮಂಜುನಾಥ್ ಹಾಗೂ ಕಲ್ಲಹಳ್ಳಿ ಗ್ರಾಮಸ್ಥರು ಸಚಿವ ರಾಜಣ್ಣ ಅವರನ್ನು ಸನ್ಮಾನಿಸಿದರು. ನಂತರ ಸಚಿವ ರಾಜಣ್ಣ ಅವರು ಡಿ ದೇವರಾಜ ಅರಸರ ಮನೆಯನ್ನು ವೀಕ್ಷಿಸಿ ಪಕ್ಕದಲ್ಲಿರುವ ಜೈನ ಬಸದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಈ ವೇಳೆ ಹುಣಸೂರು ನಗರಾಭಿವೃದ್ಧಿ ಯೋಜನ ಪ್ರಾಧಿಕಾರ ಅಧ್ಯಕ್ಷ ಎಚ್.ಪಿ.ಅಮರ್‌ನಾಥ್, ಹಿರಿಯ ಸಹಕಾರಿ ತೇಜಸ್ ವಿ ಗೌಡ, ಕಾಂಗ್ರೆಸ್ ಕಾರ್ಯಾಧ್ಯಕ್ಷ ಪುಟ್ಟರಾಜ್, ಮಾಜಿ ಅಧ್ಯಕ್ಷ ಬಿಳಿಕೆರೆ ಬಸವರಾಜ್, ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಕಲ್ಕುಣಿಕೆ ರಾಘು, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಎಚ್. ಎಸ್.ಕುಮಾರ್, ಮಾಜಿ ಸದಸ್ಯ ಚಿಕ್ಕಸ್ವಾಮಿ, ಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಜಗದೀಶ್, ಮುಖಂಡರಾದ ಕೆಂಪನಾಯಕ, ಬೋಗಪ್ಪ, ಶಿವಣ್ಣ, ಪ್ರಭಾಕರ್ ಮಯೂರ, ಗಾರೆರಾಜು, ದರ್ಶನ್, ಪೈಜಾಲ್, ಕೌಶೀಕ್, ನೇತ್ರವತಿ, ಮಣಿಯಮ್ಮ ಇತರರಿದ್ದರು.