ತಳುವಗೇರಾ ಗ್ರಾಮದಲ್ಲಿ ಏರ್ಪಡಿಸಿದ್ದ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ತಾಪಂ ಇಒ ಶಿವಪ್ಪ ಸುಬೇದಾರ್ ಚಾಲನೆ ನೀಡಿದರು.  
ಜಿಲ್ಲೆ

ದೇಶಭಕ್ತರ ಆದರ್ಶ ಅಳವಡಿಸಿಕೊಳ್ಳಿ -ತಾಪಂ ಇಒ ಶಿವಪ್ಪ ಸುಬೇದಾರ್ ಮನವಿ

ಕುಷ್ಟಗಿ: ಮಣ್ಣು, ದೇಶಕ್ಕಾಗಿ ಹೋರಾಡಿದವರ ಆದರ್ಶ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶಾಭಿಮಾನ ಮೆರೆಯಬೇಕಿದೆ ಎಂದು ತಾಪಂ ಇಒ ಶಿವಪ್ಪ ಸುಬೇದಾರ್ ಹೇಳಿದರು.

ತಳುವಗೇರಾ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಆದರ್ಶ ವಿದ್ಯಾಲಯದ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶದ ಮಣ್ಣಿಗಾಗಿ ತಮ್ಮನ್ನು ಅರ್ಪಣೆ ಮಾಡಿಕೊಂಡವರ ಸ್ಮರಣೆ ಮಾಡಬೇಕಿದೆ ಎಂದರು.

ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪೊಪಾ, ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಹಿರೇಮನಿ, ಉಪಾಧ್ಯಕ್ಷೆ ಲಕ್ಷ್ಮವ್ವ, ಪಿಡಿಒ ಬಸವರಾಜ ಯರಗೇರಿ, ಶಾಲೆಯ ಮುಖ್ಯ ಶಿಕ್ಷಕರಾದ ರಾಮಚಂದ್ರ ಕಾರ್ವಿ, ಸಂಗಪ್ಪ ಕಿರಸೂರು, ಶಿಕ್ಷಣ ಸಂಯೋಜಕ ದಾವಲಸಾಬ್, ಎಸ್ಡಿಎಂಸಿ ಅಧ್ಯಕ್ಷರಾದ ಪರಸಪ್ಪ, ಪಕೀರಪ್ಪ, ಗ್ರಾಪಂ ಸದಸ್ಯ ವೀರೇಶ ರಂಜಾನ್, ಐಇಸಿ ಸಂಯೋಜಕ ಚಂದ್ರಶೇಖರ ಹಿರೇಮಠ ಇತರರು ಇದ್ದರು.