ಜಿಲ್ಲೆ

ಸಂಸ್ಕಾರಯುತ ಶಿಕ್ಷಣ ವ್ಯಕ್ತಿತ್ವ ನಿಮಾರ್ಣದ ಭದ್ರ ಬುನಾದಿ

ಉಡುಪಿ: ವಿದ್ಯಾದಾನ ಅತ್ಯಂತ ಶ್ರೇಷ್ಠ ದಾನ. ಕೇವಲ ಅಂಕಗಳೇ ಶಿಕ್ಷಣದ ಮೂಲ ಉದ್ದೇಶವಲ್ಲ ಶಿಕ್ಷಣದಿಂದ ಜ್ಞಾನಾರ್ಜನೆಯ ಜೊತೆಗೆ ಹೃದಯ ಸಂಸ್ಕಾರವಾಗಬೇಕು. ನಮ್ಮಲ್ಲಿ ಜೀವನ ಮೌಲ್ಯಗಳನ್ನು ಬೆಳೆಸುವ ಸಂಸ್ಕಾರಯುತ ಶಿಕ್ಷಣವೇ ವ್ಯಕ್ತಿತ್ವ ನಿಮಾರ್ಣಕ್ಕೆ ಭದ್ರ ಅಡಿಪಾಯ. ವಿದ್ಯೆಯಿಂದ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಬೆಳೆಯಬೇಕು  ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ರಾಜೇಶ್ ಪ್ರಸಾದ್ ಹೇಳಿದರು.

ಪಟ್ಲ  ರೂರಲ್ ಎಜ್ಯುಕೇಶನ್ ಸೊಸೈಟಿಯ ಯು.ಎಸ್.ನಾಯಕ್ ಪ್ರೌಢಶಾಲೆ ನವೀಕೃತ ಕಟ್ಟಡ  ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನವೀಕೃತ ಕಟ್ಟಡ ಉದ್ಘಾಟಿಸಿ, ಯಾವುದೇ ಬೌತಿಕ ಸಂಪತ್ತು ಶಾಶ್ವತವಲ್ಲ. ನಮ್ಮ ಸುತ್ತ ಮುತ್ತಲ ಸಮಾಜಕ್ಕೆ ಪ್ರಯೋಜನವಾಗುವ ಒಳ್ಳೆಯ ಕೆಲಸಗಳನ್ನು ಮಾಡುವುದರಲ್ಲಿ ಜೀವನದ ಸಾರ್ಥಕತೆ ಅಡಗಿದೆ. ಶಾಲೆಯ ಅಭಿವೃದ್ಧಿ ಕೆಲಸಗಳಲ್ಲಿ ಎಲ್ಲರು ಸಂಪೂರ್ಣ ಸಹಕಾರ ನೀಡಬೇಕು.  ಗ್ರಾಮೀಣ ಪ್ರದೇಶದ ಈ ಶಾಲೆ ಸಂಸ್ಕಾರಯುತ ಶಿಕ್ಷಣ ನೀಡುತ್ತಾ ಒಂದು ಮಾದರಿ ಶಾಲೆಯಾಗಿ ರೂಪುಗೊಳ್ಳುತ್ತಿರುವುದು ಸಂತಸದ ವಿಚಾರ ಎಂದರು.

ಶಾಲಾ ಕಟ್ಟಡ ನಿಮಾರ್ಣದಲ್ಲಿ ವಿಶೇಷ ಸಹಕಾರ ನೀಡಿದಂತಹ ಕೆ. ಕಮಾಲಾಕರ್ ನಾಯಕ್, ಅಂಬಾಗಿಲು , ರಮೇಶ್ ನಾಯಕ ಮುಂಬಾೃ, ಕೇಶವ ಮೂರ್ತಿ ಬೆಲ್ಪತ್ರೆ, ಜಯರಾಜ್ ಶೆಟ್ಟಿ ಮಣಿಪಾಲ, ಪುನೀತ್ ನಾಯಕ್, ಪರ್ಕಳ, ಮುದ್ಧಣ್ಣ ಬಾಂದೇಲ್ಕರ್  ಇವರನ್ನು ಆಡಳಿತ ಮಂಡಳಿಯ ವತಿಯಿಂದ ಗೌರವಿಸಲಾಯಿತು. ಸಂಚಾಲಕ ಡಾ. ನಾರಾಯಣ ಶೆಣೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕರಾದ ಶ್ರೀಕಾಂತ ಪ್ರಭು ಸ್ವಾಗತಿಸಿದರು. ಶಿಕ್ಷಕ  ಎಚ್. ಎನ್ ನಟರಾಜ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.