ಜಿಲ್ಲೆ

ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಗೋವಾ ಘಟಕ ಉದ್ಘಾಟನೆ

Mangaluru - Hariprasad Rai



ಮಂಗಳೂರು : ಕನ್ನಡದ ಶುದ್ದ ಭಾಷೆಯನ್ನು ಯಕ್ಷಗಾನದಲ್ಲಿ ಕಾಣಬಹುದು. ಶಿಸ್ತು, ಸಂಸ್ಕಾರ, ಶ್ರದ್ದಾ ಭಕ್ತಿಯನ್ನು ಯಕ್ಷಗಾನದಲ್ಲಿ ಕಾಣಲು ಸಾಧ್ಯವಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ 39ನೇ ಗೋವಾ ಘಟಕವನ್ನು ಪಣಜಿಯ ಸಭಾಗೃಹದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ‘ ಇಂದು ಯುವ ಸಮುದಾಯ ಯಕ್ಷಗಾನದ ಆಕರ್ಷಣೆಗೆ ಒಳಗಾಗಿದ್ದಾರೆ. ಪುರಾಣದ ಕತೆಗಳನ್ನು ತಿಳಿದುಕೊಳ್ಳುವ
ಆಸಕ್ತಿಯೂ ಯುವ ಸಮುದಾಯಕ್ಕೆ ಇದೆ ಎರಂದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪ್ರಧಾನ ಸಂಚಾಲಕ ಶಶಿಧರ ಶೆಟ್ಟಿ ಬರೋಡಾ , ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಟ್ರಸ್ಟ್‌ನ ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಂಬಳ ವಿಭಾಗದ ಅಶೋಶ್ ಶೆಟ್ಟಿ ಬೇಲಾಡಿ, ಸದಾನಂದ ಶೆಟ್ಟಿ ಬೆಳುವಾಯಿ, ಮಾಜಿ ರಣಜಿ ಆಟಗಾರ ಜಯೇಶ್ ಶೆಟ್ಟಿ ಗೋವಾ, ಯಕ್ಷಗಾನ ಭಾಗವತ ಸದಾಶಿವ ಅಮೀನ್ ಕೊಕ್ಕರ್ಣೆ, ಪಾತ್ರಧಾರಿಗಳಾದ ನವೀನ್ ಶಾನ್‌ಭಾಗ್, ಮಹಾಬಲ ಭಟ್ ಗೋವಾ ಇವರುಗಳನ್ನು ಸನ್ಮಾನಿಸಲಾಯಿತು. ಅಮೃತೇಶ್ವರಿ ಮೇಳದ ಸತೀಶ್ ಮೊಗವೀರ ಹಾಲಾಡಿ, ಕಮಲಶಿಲೆ ಮೇಳದ ವಿಶ್ವನಾಥ ಪೂಜಾರಿ ಹೆನ್ನಾಬೈಲ್, ಮಾರಣಕಟ್ಟೆ ಮೇಳದ ರಾಕೇಶ್ ಶೆಟ್ಟಿ ಮೇಗರಹಳ್ಳಿ ಇವರುಗಳಿಗೆ ಆರ್ಥಿಕ ನೆರವು ನೀಡಲಾಯಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಗೋವಾ ಘಟಕದ ಅಧ್ಯಕ್ಷ ಗಣೇಶ್ ಶೆಟ್ಟಿ ಇರ್ವತ್ತೂರು, ಗೌರಾವಾಧ್ಯಕ್ಷ ವಿಜಯೇಂದ್ರ ಶೆಟ್ಟಿ, ಗುಜರಾತ್ ಘಟಕದ ಅಧ್ಯಕ್ಷ ಅಜಿತ್ ಶೆಟ್ಟಿ, ಗೋವಾ ಬಂಟರ ಸಂಘದ ಅಧ್ಯಕ್ಷ ಶಶಿಧರ ನಾಯ್ಕ್, ಗೋವಾ ಬಿಲ್ಲವ ಸಂಘದ ಅಧ್ಯಕ್ಷ ನಾಗೇಶ್ ಪೂಜಾರಿ, ಗೋವಾ ನಾರಾಯಣ ಗುರು ಸೇವಾ ಟ್ರಸ್ಟ್‌ನ ಅಧ್ಯಕ್ಷ ಪ್ರಕಾಶ್ ಪೂಜಾರಿ, ಟ್ರಸ್ಟ್‌ನ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಜತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ ಅಶೋಕನಗರ, ಸಂಘಟನಾ ಕಾರ್ಯದರ್ಶಿಗಳಾದ ಬಾಳ ಜಗನ್ನಾಥ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಮಂಗಳೂರು ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ, ನಟ ಪ್ರಸನ್ನ ಶೆಟ್ಟಿ ಬೈಲೂರು, ಸುಭಾಷ್ ರೈ ಕರ್ನೂರ್ ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಮಂದಾರ್ತಿ ನಡೂರು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರಿಂದ ಶಿವದೂತ ಪಂಜುರ್ಲಿ ಯಕ್ಷಗಾನ ಪ್ರದರ್ಶನ ಜರಗಿತು.