Patil is outraged by the arrest of City Ravi 
ಜಿಲ್ಲೆ

ಸಿಟಿ ರವಿ ಬಂಧನಕ್ಕೆ ಪಾಟೀಲ್​ ಆಕ್ರೋಶ

ಮುದ್ದೇಬಿಹಾಳ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಎಂಎಲ್​ಸಿ ಸಿಟಿ ರವಿ ಅವರನ್ನು ಬಂಧಿಸಿರುವ ಕ್ರಮವನ್ನು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯ ಎ.ಎಸ್​.ಪಾಟೀಲ ನಡಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಮುಂದಿನ ಸಾಲಿನಲ್ಲಿ ಕುಳಿತ ನಾಯಕರು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಎನ್ನುವದರ ಬಗ್ಗೆ ಕನಿಷ್ಠ ಕಾಳಜಿ ತೋರದಿರುವುದು ದುರದೃಷ್ಟಕರ ಸಂಗತಿ ಎಂದಿದ್ದಾರೆ.

ಅಧಿವೇಶನ ಪ್ರಾರಂಭದಲ್ಲಿ ಸುವರ್ಣಸೌಧದ ಹೊರಗಡೆ ಪಂಚಮಸಾಲಿ ಸಮಾಜದವರ ಮೇಲೆ ಲಾಠಿ ಚಾರ್ಜ್​ ಟನೆ ಹಾಗೂ ಕೊನೆಯ ದಿನ ಪೊಲೀಸರು ಸುವರ್ಣ ಸೌಧದೊಳಗೆ ನುಗ್ಗಿ ಜನಪ್ರತಿನಿಧಿಯೊಬ್ಬರನ್ನು ಬಂಧಿಸಿದ್ದು, ಕಾಂಗ್ರೆಸ್​ ಸರ್ಕಾರದ ಗೂಂಡಾವರ್ತನೆಗೆ ಸಾಯಾಗಿದೆ ಎಂದು ಅವರು ಟೀಕಿಸಿದ್ದಾರೆ.

ಸಚಿವೆಯ ಹಿಂಬಾಲಕರು ಸದನದೊಳಗೆ ಪ್ರವೇಶಿಸಿ ಗೂಂಡಾಗಳಂತೆ ವರ್ತಿಸಿದ್ದಾರೆ. ಎಮ್ಮೆಲ್ಸಿಯೊಬ್ಬರ ಮೇಲೆ ಹಲ್ಲೆ ಮಾಡಲು ಮುಂದಾಗಿರುವುದು ಸಂವಿಧಾನೇ ಎಂದು ಅವರು ಪ್ರಶ್ನಿಸಿದ್ದಾರೆ.

ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸಭಾಧ್ಯರು, ಸಭಾಪತಿಗಳು ಅಲ್ಲಿ ನಡೆಯುವ ಸರಿ, ತಪ್ಪು ತೀರ್ಮಾನಿಸುವ ಅಧಿಕಾರ ಹೊಂದಿರುತ್ತಾರೆಯೇ ಹೊರತು ಪೊಲೀಸರಲ್ಲ. ಈ ವಿಷಯದಲ್ಲಿ ಪೊಲೀಸರು ಎಡವಿದ್ದಾರೆ. ಪೊಲೀಸ್​ ಇಲಾಖೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.